ಎರಡೂ ಕೆನ್ನೆಗೆ ಹೊಡೆದರೆ ಏನು ಮಾಡಬೇಕೆಂಬುದನ್ನೆ ಗಾಂಧೀಜಿ ಹೇಳಿಲ್ಲ

0
25

ಹುಬ್ಬಳ್ಳಿ: ದಾಳಿಯನ್ನು ಮೊದಲು ಶುರು ಮಾಡಿದ್ದೇ ಪಾಕಿಸ್ತಾನ. ಅಂತ್ಯವನ್ನು ನಾವು ಮಾಡುತ್ತೇವೆ. ನಾವು ಗಾಂಧಿವಾದಿಗಳು ನಿಜ. ಆದರೆ, ಎರಡೂ ಕೆನ್ನೆಗೆ ಹೊಡೆದಾಗ ಏನು ಮಾಡಬೇಕು ಎಂಬುದನ್ನು ಗಾಂಧೀಜಿ ಹೇಳಿಲ್ಲ. ಅದನ್ನು ಮೀರಿದರೆ ನಾವು ಸುಮ್ಮನೆ ಕೂಡುವವರಲ್ಲ ಎಂದು ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸೇನೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ ಭಾರತೀಯ ಸೇನಾಪಡೆಗೆ ಬೆಂಬಲ ಸೂಚಿಸಲು ರಾಜ್ಯ ಕಾಂಗ್ರೆಸ್‌ನಿಂದ ಶುಕ್ರವಾರ ಬೆಳಗ್ಗೆ `ಜೈ ಹಿಂದ್ ತಿರಂಗಾ ಯಾತ್ರೆ’ಯನ್ನು ಮಾಡಿದ್ದೇವೆ. ನಮ್ಮ ಸೈನಿಕರ ಮೇಲೆ ನಂಬಿಕೆ ಇದೆ. ನಮ್ಮನ್ನು ಕೆಣಕಿದರೆ ಸುಮ್ಮನಿರಲ್ಲ ಎಂಬ ಸಂದೆಶವನ್ನು ಇಡೀ ಪ್ರಪಂಚಕ್ಕೇ ತಿಳಿಸಿದ್ದೇವೆ ಎಂದರು.
ಈ ದಾಳಿ ನಿಲ್ಲಬಾರದು, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ. ಇನ್ನೂ ಕಲಿಸುತ್ತೇವೆ. ಅಲ್ಲದೇ, ರಾಜ್ಯದ ಎಲ್ಲ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸೈನಿಕರ ನೈತಿಕ ಬಲ ಹೆಚ್ಚಿಸಲಾಗಿದೆ ಎಂದರು.

Previous articleರಜೆ ಮೇಲೆ ಬಂದಿದ್ದ ಸೈನಿಕ ತುರ್ತು ಕರ್ತವ್ಯಕ್ಕೆ ಮರಳಿದ
Next articleಪಾಕಿಸ್ತಾನದ ಎಲ್ಲ ಡ್ರೋನ್‌ಗಳು ನಾಶ