ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪಾಕ್‌ಗೆ ಸರಕು ಮಾರಿದರೆ ಹುಷಾರ್

0
22

ನವದೆಹಲಿ: ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪಾಕಿಸ್ತಾನಕ್ಕೆ ಸರಕು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ತಕ್ಷಣವೇ ಇದನ್ನು ನಿಲ್ಲಿಸಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಾಕಿಸ್ತಾನಕ್ಕೆ ಸರಕುಗಳ ಮಾರಾಟ ಮಾಡದಂತೆ ಎಲ್ಲಾ ವಾಣಿಜ್ಯಿಕ ಕಂಪನಿಗಳು ಮತ್ತು ಕಾರ್ಪೋರೇಷನ್ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಈ ಹಿಂದೆಯೇ ನೋಟಿಸ್ ಜಾರಿ ಮಾಡಿದೆ. ಆದರೂ ಕೆಲ ಇ-ಕಾಮರ್ಸ್ ವೇದಿಕೆ, ಸಂಸ್ಥೆಗಳಲ್ಲಿ ಸರಕು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಕೇಂದ್ರ ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಸಚಿವರು ಕಟ್ಟೆಚ್ಚರ ನೀಡಿದ್ದಾರೆ.
ಅಮೇಜಾನ್, ಫ್ಲಿಪ್‌ಕಾರ್ಟ್, ಯು ಬೈ ಇಂಡಿಯಾ, ದಿ ಫ್ಲ್ಯಾಗ್ ಕಂಪನಿ ಮತ್ತು ಕಾರ್ಪೊರೇಷನ್‌ಗಳಿಗೆ ಸರಕು ಮಾರಾಟ ಮಾಡದಂತೆ ನೋಟಿಸ್ ಜಾರಿ ಮಾಡಿದೆ. ಆದರೂ ಈ ಆದೇಶ ಉಲ್ಲಂಘಿಸುತ್ತಿರುವುದು ಗೊತ್ತಾಗಿದೆ. ದೇಶದ ಹಿತದೃಷ್ಟಿಯಿಂದ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಚಿವ ಜೋಶಿ ಸೂಚಿಸಿದ್ದಾರೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್ಗಳು ಪಾಕಿಸ್ತಾನ ಸಂಬಂಧಿತ ಎಲ್ಲಾ ವಸ್ತುಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ರಾಷ್ಟ್ರೀಯ ಕಾನೂನನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸಚಿವ ಪ್ರಲ್ಹಾದ ಜೋಶಿ ನಿರ್ದೇಶನ ನೀಡಿದ್ದಾರೆ.

Previous articleಸಿದ್ದರಾಮಯ್ಯಗೆ ಅರಸು ವಿ.ವಿ ಗೌರವ ಡಾಕ್ಟರೇಟ್‌ಗೆ ನಿರ್ಧಾರ
Next articleಶಿಕ್ಷಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ