ಇಬ್ಬರು ನದಿ ನೀರು ಪಾಲು

0
14

ಗದಗ: ಸ್ನಾನಕ್ಕಾಗಿ ಮಲಪ್ರಭಾ ನದಿಗೆ ತೆರಳಿದ್ದ ನಾಲ್ಕು ಜನರಲ್ಲಿ ಮಾವ, ಅಳಿಯ ನೀರು ಪಾಲಾಗಿದ್ದು, ಇಬ್ಬರು ಪಾರಾಗಿರುವ ಘಟನೆ ಮಂಗಳವಾರ ರೋಣ ತಾಲೂಕಿನ ಹೊಳೆಆಲೂರ ಸಮೀಪ ನಡೆದಿದೆ.
ನೀರು ಪಾಲಾದವರನ್ನು ಗದಗ ನಗರದ ನಾಗರಾಜ್ (೩೭), ಕೊಪ್ಪಳ ಮೂಲದ ಗಂಗಪ್ಪ (೩೫) ಎಂದು ಗುರುತಿಸಲಾಗಿದೆ. ಮಲಪ್ರಭಾ ನದಿಗೆ ಪೂಜೆ ಮಾಡಲು ಕುಟುಂಬ ಸಮೇತ ಆಗಮಿಸಿದ್ದರೆಂದು ತಿಳಿದು ಬಂದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ನೀರು ಪಾಲಾದ ವ್ಯಕ್ತಿಗಳ ಶೋಧನೆ ನಡೆಸಿದರು.
ಮಲಪ್ರಭಾ ನದಿ ದಂಡೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರೋಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Previous articleಸಂಗಮೇಶ್ ಪುತ್ರನ ಒದ್ದು ಒಳಗೆ ಹಾಕಿ
Next articleಮೌಲ್ಯಯುತ ಶಿಕ್ಷಣ ಪರಿಣಾಮಕಾರಿ ಜಾರಿ ಅವಶ್ಯ