ಇಬ್ಬರು ದರೋಡೆಕೋರರಿಗೆ ಗುಂಡು ಹೊಡೆದು ಬಂಧನ

0
21

ಹುಬ್ಬಳ್ಳಿ: ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಸವಾರರನ್ನು ಅಡ್ಡಗಟ್ಟಿ ರಾಬರಿ ಹಾಗೂ ಮನೆ ದರೋಡೆಗೆ ಯತ್ನಿಸಿದ್ದ ಗುಜರಾತ್ ಮೂಲದ ಇಬ್ಬರಿಗೆ ಪೊಲೀಸರು ಗುಂಡು ಹೊಡೆದಿರುವ ಘಟನೆ ತಡರಾತ್ರಿ ನಡೆದಿದೆ.
ಗುಜರಾತ್ ಮೂಲದ ದಿಲೀಪ್ ಮತ್ತು ನಿಲೇಶ್ ಎಂಬುವರಿಗೆ ಹಳ್ಯಾಳ ಕಡಪಟ್ಟಿ ಹೊರವಲಯದಲ್ಲಿ ಗುಂಡು ಹೊಡೆದು ಬಂಧಿಸಲಾಗಿದೆ‌. ಘಟನೆಯಲ್ಲಿ ಬೆಂಡಿಗೇರಿ ಠಾಣೆಯ ಮೂವರು ಸಿಬ್ಬಂದಿ ಗಾಯಗೊಂಡಿದ್ದು, ಎಲ್ಲರು ಕೆಎಂಸಿಆರ್ ಐನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಇನ್ಸಪೆಕ್ಟರ್ ಎಸ್.ಆರ್. ನಾಯಕ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಸಂ.ಕ. ಪೇಪರ್ ಬಾಯ್ ಗೆ ಚಾಕು ತೋರಿಸಿ ಬೈಕ್ ರಾಬರಿ: ಸಂಯುಕ್ತ ಕರ್ನಾಟಕ ಪತ್ರಿಕೆ ಹಾಕುವ ಹುಡಗನಿಗೆ ದರೋಡೆಕೋರರು ಚಾಕು ತೋರಿಸಿ, ಹಲ್ಲೆ ಮಾಡಿ ಬೈಕ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾತ್ರಿ ಗಬ್ಬೂರು ಹತ್ತಿರದ ಮೆಟ್ರೋ ಬಳಿ ನಡೆದಿದೆ.
ಪೇಪರ್ ಬಾಯ್ ರವಿ ಎಂಬುವರನ್ನು ಅಡ್ಡಗಟ್ಟಿ ಚಾಕು ಹಾಕಿದ್ದು, ಬೈಕ್ ಕಿತ್ತು ಪರರಾಯಿಯಾಗಿದ್ದಾರೆ.

Previous articleಪ್ರತಿ ಕನ್ನಡಿಗನ ಮೇಲೆ 1 ಲಕ್ಷ ಸಾಲದ ಹೊರೆ
Next articleಮಹಾಕುಂಭ ಕಾಲ್ತುಳಿತದ ಸಾವುನೋವುಗಳ ಅಧಿಕೃತ ದತ್ತಾಂಶ ಬಿಡುಗಡೆಗೆ ಆಗ್ರಹ