Home ತಾಜಾ ಸುದ್ದಿ ಇಂದಿನ ಕಾಂಗ್ರೆಸ್ ಸಿದ್ಧಾಂತಕದಕ್ಕೆ ಅಜಗಜಾಂತರ ವ್ಯತ್ಯಾಸ

ಇಂದಿನ ಕಾಂಗ್ರೆಸ್ ಸಿದ್ಧಾಂತಕದಕ್ಕೆ ಅಜಗಜಾಂತರ ವ್ಯತ್ಯಾಸ

0

ಬೆಂಗಳೂರು: ಗಾಂಧಿ ಕಾಂಗ್ರೆಸ್ ಸಿದ್ದಾಂತಗಳಿಗೂ ಇಂದಿನ ಕಾಂಗ್ರೆಸ್ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ
ನಗರದ ಬಿಜೆಪಿ ಕಛೆರಿಯಲ್ಲಿ ಮಾತನಾಡಿ ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂಬ ಮೂರು ಘೋಷಣೆಗಳನ್ನು ಹಾಕಿಕೊಂಡಿದೆ. ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷ ಈ ಮೂರು ಘೋಷಣೆಗಳಿಗೂ ವಿರುದ್ಧವಾಗಿದೆ. ಗಾಂಧಿ ಕಾಂಗ್ರೆಸ್ ಸಿದ್ದಾಂತಗಳಿಗೂ ಇಂದಿನ ಕಾಂಗ್ರೆಸ್ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಾಂಗ್ರೆಸ್ ಪಕ್ಷವನ್ನು ಸುಡುವ ಮನೆ, ಕಾಂಗ್ರೆಸ್ ಸೇರುವುದೆಂದರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಅಂಬೇಡ್ಕರ್ ಹೇಳಿದ್ದರು ಎಂದಿದ್ದಾರೆ.

Exit mobile version