ಆಸ್ತಿ ತೆರಿಗೆ ಏರಿಸಿ ‘ಬ್ಯಾಡ್ ಬೆಂಗಳೂರು’ ಮಾಡಲು ಹೊರಟಿದ್ದಾರೆ

0
17

ಬೆಂಗಳೂರು: ಆಸ್ತಿ ತೆರಿಗೆ ಏರಿಸಿ ‘ಬ್ಯಾಡ್ ಬೆಂಗಳೂರು’ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಳತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು “ಬ್ರ್ಯಾಂಡ್ ಬೆಂಗಳೂರು” ಪದ ಜಪಿಸುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಬೆಂಗಳೂರಿಗರಿಗೆ ಆಸ್ತಿ ತೆರಿಗೆಯನ್ನು ಶೇ.5.3 ರಿಂದ ಶೇ 8.2 ರವರೆಗೆ ಏರಿಸಿ ಜನರಿಗೆ ಬರೆ ಎಳೆದು ‘ಬ್ಯಾಡ್ ಬೆಂಗಳೂರು’ ಮಾಡಲು ಹೊರಟಿದ್ದಾರೆ. ವಾರಂಟಿಯೂ ಇಲ್ಲದ ಗ್ಯಾರಂಟಿ ತೋರಿಸಿ ಬೆನ್ನಹಿಂದೆಯೇ ಒಂದರಮೇಲೊಂದು ತೆರಿಗೆ ಹೇರಿ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ನಯವಂಚಕತನಕ್ಕೆ ಜನರೇ ಬುದ್ದಿಕಲಿಸುವ ಕಾಲ ಸನ್ನಿಹಿತ ವಾಗುತ್ತಿದೆ ಎಂದಿದ್ದಾರೆ.

Previous articleಪ್ರಧಾನಿಯಿಂದ 10 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ
Next articleCAA ಪೋರ್ಟಲ್ ಆರಂಭ