Home ನಮ್ಮ ಜಿಲ್ಲೆ ಉತ್ತರ ಕನ್ನಡ ಆತ್ಮಲಿಂಗ ದರ್ಶನ ಪಡೆದ ಗೋಲ್ಡನ್ ಗಾಯ್ಸ್‌

ಆತ್ಮಲಿಂಗ ದರ್ಶನ ಪಡೆದ ಗೋಲ್ಡನ್ ಗಾಯ್ಸ್‌

0

ಗೋಕರ್ಣ: ಗೋಲ್ಡನ್ ಗಾಯ್ಸ ಖ್ಯಾತಿಯ ಪುಣೆಯ ಸನ್ನಿ ನಾನಾ ಸಾಹೇಬ್ ವಾಘಘೋರೆ, ಸಂಜಯ ಗುಜ್ಜಾರ(ಬಂಟಿ) ಕುಟುಂಬ ಸಮೇತರಾಗಿ ಶನಿವಾರ ಸಂಜೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ವೇ. ಸುಬ್ರಹ್ಮಣ್ಯ ಅಡಿ ಪೂಜಾ ಕೈಂಕರ್ಯ ನೆರವೇರಿಸಿ ಮಂದಿರದ ವತಿಯಿಂದ ಪ್ರಸಾದ ನೀಡಿ ಗೌರವಿಸಿದರು. ವೇ.ಶ್ರೀಧರ ಜಂಭೆ, ಗೋಪಾಲ ಶಂಕರಲಿಂಗ ನಿರ್ವಹಿಸಿದರು.
ಈ ವೇಳೆ ಮಂದಿರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಇದರಂತೆ ಮಹಾಗಣಪತಿ, ತಾಮ್ರಗೌರಿ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಚಿನ್ನದ ಕಾರು, ಮೈಮೇಲೆ ಚಿನ್ನಾಭರಣದ ರಾಶಿ: ಬಂಗಾರದ ಬಣ್ಣದ ಐಷಾರಾಮಿ ಕಾರ್‌ನಲ್ಲಿ ಬಂದಿಳಿದ ಇವರು ಮೈಮೇಲೆ ಚಿನ್ನದ ಸರ ರಾಶಿ ತೊಟ್ಟು ತೆರಳುತ್ತಿರುವ ವೇಳೆ ಪ್ರವಾಸಿಗರ ಗಮನ ಸೆಳೆದರಲ್ಲದೇ ಇವರೊಂದಿಗೆ ಪೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ ಸಿಬ್ಬಂದಿ ನಿಯಂತ್ರಿಸಿದರು.

Exit mobile version