ಅರಬ್ಬಿ ಸಮುದ್ರದಲ್ಲಿ ಮುಳುಗಿದ ಮಲ್ಪೆ ಬೋಟ್: ಎಂಟು ಮೀನುಗಾರರ ರಕ್ಷಣೆ

0
20

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ನ ತಳಭಾಗದ ಕಬ್ಬಿಣದ ವೆಲ್ಟಿಂಗ್ ಬಿಟ್ಟುಹೋದ ಪರಿಣಾಮ ಬೋಟ್ ಸಮುದ್ರದಲ್ಲಿಯೇ ಮುಳುಗಡೆಯಾಗಿದ್ದು, ಇತರೆ ಮೀನುಗಾರರ ಸಹಾಯದಿಂದ ೮ ಮಂದಿಯನ್ನು ರಕ್ಷಣೆ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಉಡುಪಿ ಜಿಲ್ಲೆಯ ಮಲ್ಪೆ ಮೂಲದ ಸೀ ಹಂಟರ್ ಹೆಸರಿನ ಬೋಟ್ ಮಲ್ಪೆಯಿಂದ ಮಹಾರಾಷ್ಟ್ರದ ಕಡೆ ಈ ಬೋಟ್ ಚಲಿಸುತಿತ್ತು. ಕಾರವಾರದಿಂದ ೯ ನಾಟಿಕನ್ ಮೈಲುದೂರದ ಲೈಟ್ ಹೌಸ್ ಬಳಿ ಚಲಿಸುತಿದ್ದ ವೇಳೆ ಬೋಟ್ ನ ತಳಭಾಗದ ಕಬ್ಬಿಣದ ಭಾಗದಲ್ಲಿ ವೆಲ್ಡಿಂಗ್ ಬಿಟ್ಟುಹೋಗಿತ್ತು.
ವೆಲ್ಡಿಂಗ್ ಬಿಟ್ಟುಹೋದ ಪರಿಣಾಮ ಬೋಟ್‌ನ ಇಂಜಿನ್ ಭಾಗಕ್ಕೆ ನೀರು ನುಗ್ಗಿದ್ದು ಬೋಟ್ ಮುಳುಗಡೆಯಾಗತೊಡಗಿತ್ತು. ತಕ್ಷಣ ಸ್ಥಳೀಯ ಮೀನುಗಾರರು ಎಂಟು ಜನ ಮೀನುಗಾರರನ್ನು ರಕ್ಷಣೆಮಾಡಿದ್ದಾರೆ.
ಆದರೇ ಮುಳುಗುವ ಹಂತದಲ್ಲಿದ್ದ ಬೋಟ್ನನ್ನು ದಡಕ್ಕೆ ತರಲು ಪ್ರಯತ್ನ ಪಟ್ಟರೂ ಆಗದೇ ಮಾರ್ಗ ಮಧ್ಯದಲ್ಲೇ ಬೋಟ್ ಮುಳುಗಡೆಯಾಗಿದೆ. ರಕ್ಷಣೆಗೊಳಗಾದ ಎಂಟುಜನ ಮೀನುಗಾರರನ್ನು ಸೋಮವಾರ ಸಂಜೆ ಕಾರವಾರದ ಬೈತಕೋಲ್ ಬಂದರಿಗೆ ಕರೆತರಲಾಗಿದ್ದು, ಬೋಟ್ ಮುಳುಗಡೆಯಿಂದ ಒಂದು ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

Previous articleನಾನು ಏಕೆ ಸಿಎಂ ಆಗಬಾರದು..?
Next articleಸಂಸದರ ಮನೆಗೆಯಂಗಳಕ್ಕೆ ಬಂದ ಅಪರೂಪದ ಅತಿಥಿ…!