Home ತಾಜಾ ಸುದ್ದಿ ಅಧಿಕಾರ ದುರುಪಯೋಗ: ಕಾಂಗ್ರೆಸ್‌ನಿಂದ ದಳದ ಆಸ್ತಿ ಕಬ್ಜಾ

ಅಧಿಕಾರ ದುರುಪಯೋಗ: ಕಾಂಗ್ರೆಸ್‌ನಿಂದ ದಳದ ಆಸ್ತಿ ಕಬ್ಜಾ

0
93

ಹುಬ್ಬಳ್ಳಿ: ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿರುವ ಜನತಾದಳದ ಆಸ್ತಿಯನ್ನು ಅನಧಿಕೃತವಾಗಿ ಕಾಂಗ್ರೆಸ್‌ನವರು ಕಬ್ಜಾ ಮಾಡಿದ್ದಾರೆ. ಈ ಸಂಬಂಧ ದಾಖಲೆಗಳನ್ನು‌ ಪರಿಶೀಲಿಸಿ ನಂತರ ಕ್ರಮ‌ ಕೈಗೊಳ್ಳಲಾಗುವುದು ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಭಾನುವಾರ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜನತಾ ದಳದ ಆಸ್ತಿಯನ್ನು ಕಬ್ಜಾ ಮಾಡಿದೆ ಎಂದು ಆರೋಪಿಸಿದರು.
ಬಿಜೆಪಿಯಲ್ಲಿನ ಬಣ ಬಡಿದಾಟ ಅವರ ವಿವೇಚನೆಗೆ ಬಿಟ್ಟಿದ್ದು, ಆದರೂ, ನನ್ನ ಕೆಲ ಬಿಜೆಪಿ ಸ್ನೇಹಿತರಿಗೆ ಅನುಸರಿಸಿಕೊಂಡು ಹೋಗುವಂತೆ ತಿಳಿಸಿದ್ದೇನೆ ಎಂದರು.