Home ತಾಜಾ ಸುದ್ದಿ ಅದಾನಿಗೆ ಕಾಡಿದ್ದ ಹಿಂಡನ್ಬರ್ಗ್ ಬಂದ್

ಅದಾನಿಗೆ ಕಾಡಿದ್ದ ಹಿಂಡನ್ಬರ್ಗ್ ಬಂದ್

0

ವಾಷಿಂಗ್ಟನ್: ಅದಾನಿ ಗ್ರೂಪ್ ಸೇರಿದಂತೆ ಹಲವಾರು ವ್ಯವಹಾರ ಸಂಸ್ಥೆ ಗಳನ್ನು ಗುರಿಯಾಗಿರಿಸಿಕೊಂಡು ಕಾರ್ಯನಿರ್ವಹಿಸಿದ್ದ ಅಮೆರಿಕದ ಕಿರು ಷೇರುಮಾರಾಟ ಸಂಸ್ಥೆಯಾದ ಹಿಂಡೆನ್‌ಬರ್ಗ್ ರಿಸರ್ಚ್ ಅನ್ನು ಬುಧವಾರ ಮುಚ್ಚಲಾಗಿದೆ. ೨೦೧೭ರಲ್ಲಿ ಆರಂಭವಾಗಿದ್ದ ಸಂಸ್ಥೆ ಯೋಜಿಸಿದ ಕಾರ್ಯಗಳೆಲ್ಲವೂ ಮುಗಿದಿರುವುದರಿಂದ ಜನವರಿ ೧೫ರಂದು ಅದನ್ನು ಮುಚ್ಚಿರುವುದಾಗಿ ಸಂಸ್ಥಾಪಕ ನೇಟ್ ಅಂಡರ್‌ಸನ್ ಘೋಷಿಸಿದ್ದಾರೆ.
ಕಳೆದ ವರ್ಷದ ಕೊನೆಯಲ್ಲೇ ಅಂಡರ್‌ಸನ್ ತಮ್ಮ ಕುಟುಂಬ, ಸ್ನೇಹಿತರು ಹಾಗೂ ತಂಡದೊಂದಿಗೆ ಸಂಸ್ಥೆಯನ್ನು ಮುಚ್ಚುವ ನಿರ್ಧಾರವನ್ನು ಹಂಚಿಕೊಂಡಿದ್ದರು. ಈ ನಿರ್ಧಾರದ ಹಿಂದೆ ಯಾವುದೇ ಬೆದರಿಕೆಯಾಗಲಿ ಅಥವಾ ವೈಯಕ್ತಿಕ ಸಮಸ್ಯೆಗಳೇನೂ ಇಲ್ಲ ಎಂದೂ ಅಂಡರ್‌ಸನ್ ಸ್ಪಷ್ಟಪಡಿಸಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಕಾರ್ಯಾರಂಭಿಸುವ ಕೆಲವೇ ದಿನಗಳ ಮೊದಲೇ ಈ ಸಂಸ್ಥೆಯನ್ನು ಮುಚ್ಚಲಾಗಿರುವುದು ಇಲ್ಲಿ ಗಮನಾರ್ಹ.
ಆಕ್ರಮಣಕಾರಿ ರೀತಿಯಲ್ಲಿ ಕಿರು ಪ್ರಮಾಣದ ಷೇರುಗಳ ಮಾರಾಟ ದಲ್ಲಿ ತಂತ್ರಗಾರಿಕೆ ಅನುಸರಿಸುತ್ತಿದ್ದ ಹಿಂಡನ್‌ಬರ್ಗ್, ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಹಾನಿಕಾರಕ ವರದಿಗಳನ್ನು ಪ್ರಕಟಿಸಿತ್ತು.

Exit mobile version