ಹುಬ್ಬಳ್ಳಿ : ಲಾಲಕೃಷ್ಣ ಅಡ್ವಾಣಿಯವರು ಧೀಮಂತ ನಾಯಕರು. ಅಪರಿಮಿತ ರಾಷ್ಡ್ರಭಕ್ತರು. ಸ್ಪೂರ್ತಿದಾಯಕ ವ್ಯಕ್ತಿತ್ವದವರು. ಅವರಿಗೆ ಭಾರತ ರತ್ನ ಗೌರವ ಲಭಿಸಿರುವುದು ತುಂಬಾ ಸಂತೋಷವಾಗಿದೆ.
ಇದಕ್ಕಾಗಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಮುತ್ಸದ್ಧಿ ನಾಯಕರಾಗಿ, ಉಪಪ್ರಧಾನಿಯಾಗಿ, ಬಿಜೆಪಿ ಸಂಸ್ಥಾಪಕರಲ್ಲೊಬ್ಬರಾಗಿ ಅಪ್ಪಟ ದೇಶಭಕ್ತಿ, ರಾಷ್ಟ್ರದ ಭದ್ರತೆಗೆ ಅಡ್ವಾಣಿಯವರ ಕೊಡುಗೆಗಳು ಶ್ಲಾಘನೀಯ. ಬಹುಶಃ ಅಡ್ವಾಣಿಯವರು ಈ ದೇಶ ಸುತ್ತಿದಷ್ಟು, ಯಾತ್ರೆಗಳನ್ನು ಮಾಡಿದವರು ಬೇರೆ ಯಾರೂ ಇಲ್ಲ. ಮೇರು ವ್ಯಕ್ತಿತ್ವದ ಅವರಿಗೆ ಭಾರತ ರತ್ನ ಗೌರವ ಲಭಿಸಿದ್ದು ಅರ್ಥಪೂರ್ಣವಾಗಿದೆ ಎಂದು ಜೋಶಿ ಹೇಳಿದ್ದಾರೆ.