ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಹತ್ಯೆ ಮಾಡಿದ ಪತ್ನಿ

ಚಿಕ್ಕಮಗಳೂರು: ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಪತ್ನಿ ಹತ್ಯೆ ಮಾಡಿರುವ ಘಟನೆ ಸಮೀಪದ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಉದ್ದೇಬೋರನಹಳ್ಳಿಯ ಶ್ರೀನಿವಾಸ್‌(55) ಮೃತ ದುರ್ದೈವಿ. ಶ್ರೀನಿವಾಸ್‌ ಪತ್ನಿ ಸುಮ ಹಾಗೂ ಆತನ ಪ್ರಿಯಕರ ಸಿದ್ದರಾಜು ಜೊತೆ ಸೇರಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಕೊಲೆಯಾದ ಶ್ರೀನಿವಾಸ್‌ಗೆ ಇಬ್ಬರು ಪತ್ನಿಯರು ಅದರಲ್ಲಿ ಮೊದಲನೇ ಪತ್ನಿ ನಿಧನ ಹೊಂದಿದ್ದು ಮೊದಲ ಪತ್ನಿಗೆ ನಾಲ್ಕು ಮಕ್ಕಳಿದ್ದು, ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ.
ಆದರೆ ಅಕ್ರಮ ಸಂಬಂಧಕ್ಕಾಗಿ ಶ್ರೀನಿವಾಸ್‌ರನ್ನು ಕೊಲೆ ಮಾಡಲಾಗಿದೆ ಎಂದು ಮೊದಲ ಹೆಂಡತಿಯ ಪುತ್ರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.