ಅಂಧನಾಗಿದ್ದರು ಅಭೂತಪೂರ್ವ ಸಾಧನೆ…

0
18

ಬೆಳಗಾವಿ: ಅಂಧನಾಗಿದ್ದರು ಕೂಡ ತನ್ನ ಛಲ ಬಿಡದೆ ಸತತ ಪ್ರಯತ್ನ ಮೂಲಕ ಪ್ರಜ್ವಲ್ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಶುಭ ಹಾರೈಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಳಗಾವಿ‌ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ 8ನೇ ತರಗತಿಯ ಪ್ರಜ್ವಲ್ ಸು. ಹನುಮನಟ್ಟಿ ಎಂಬ ವಿದ್ಯಾರ್ಥಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಷಿಪ್ ನ ವಿವಿಧ ಪ್ರಿ ಸ್ಟೈಲ್ ಹಾಗೂ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಟ್ಟು 6 ಚಿನ್ನದ ಪದಕಗಳನ್ನು ಪಡೆದುಕೊಂಡು, ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದ ಪ್ರಜ್ವಲ್ ಅಪ್ಪಟ ಹಳ್ಳಿ ಪ್ರತಿಭೆಯಾಗಿದ್ದು, ಭಾಗಶಃ ಅಂಧನಾಗಿದ್ದರು ಕೂಡ ತನ್ನ ಛಲ ಬಿಡದೆ ಸತತ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಇಂದು 6 ಚಿನ್ನದ ಪದಕಗಳನ್ನು ಪಡೆದಿದ್ದಾನೆ. ಈತನ ಸಾಧನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಭಿನಂದಿಸಿ, ವಿದ್ಯಾರ್ಥಿಯ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದ್ದಾರೆ. ಈ ವೇಳೆ ಮಾಹೇಶ್ವರಿ ಅಂದ ಮಕ್ಕಳ ಶಾಲೆಯ ದೈಹಿಕ ಶಿಕ್ಷಕ ಸುರೇಶ ಸು ಮಾದಿಗರ, ಮುಖ್ಯೋಪಾಧ್ಯಾಯ ಅನಿತಾ ಗಾವಡೆ, ಸಂಗೀತ ಶಿಕ್ಷಕಿ ಸ್ಮಿತಾ ಮಿಟಗಾರ ಮುಂತಾದವರು ಉಪಸ್ಥಿತರಿದ್ದರು.

Previous articleಬನ್ನಿ, ಯಾರೂ ರೌಡಿಗಳಿಲ್ಲ, ಎಲ್ಲರೂ ರೈತರೇ…
Next articleಗ್ಯಾರಂಟಿ ನಕಲು ಮಾಡಿ ಮೋದಿ ಕಾ ಗ್ಯಾರಂಟಿ ಎನ್ನುತ್ತಿದ್ದಾರೆ…