ಅಂತರ್ ಜಿಲ್ಲಾ ಕಳ್ಳನ ಬಂಧನ

0
21

ಮೂಡುಬಿದಿರೆ: ಮಂಗಳೂರು ನಗರದ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ. 26ರಂದು ಮಾರ್ಪಾಡಿ ಗ್ರಾಮದ ಕಡಲಕೆರೆ ಇಂಡಸ್ಟ್ರೀಯಲ್ ಏರಿಯಾದ ವಿಲ್ಕರ್ಟ್ ಎಂಬ ಹೆಸರಿನ ಗೋಡೌನ್‌ನ ಬೀಗ ಮುರಿದು ಮೀಟಿ ಗೋಡೌನ ಒಳಗೆ ಪ್ರವೇಶಿಸಿ ಗೋಡೌನ್‌ನಲ್ಲಿದ್ದ 2 ಲ್ಯಾಪ್‌ಟಾಪ್ ಮತ್ತು ನಗದು ಇರುವ ಲಾಕರನ್ನು ಕಳ್ಳತನ ಮಾಡಿರುವ ಅಂತರ್ ಜಿಲ್ಲೆಯ ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಆಗಿರುವ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆಯ ಹಂತದಲ್ಲಿತ್ತು. ಪ್ರಕರಣದ ಆರೋಪಿಗಳ ಮತ್ತು ಸೊತ್ತು ಪತ್ತೆಯ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಡೌನ್‌ನಲ್ಲಿ ಕಳ್ಳತನ ಮಾಡಿದ ಅಂತರ್ ಜಿಲ್ಲಾ ಆರೋಪಿಯಾದ ರಾಯಚೂರು ಚಂದ್ರು(33) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಯು ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಗೋಡೌನ್‌ನಲ್ಲಿ ಕಳ್ಳತನ ಮಾಡಿದ ಎಚ್‌ಪಿ ಕಂಪನಿಯ 2 ಲ್ಯಾಪ್‌ಟಾಪ್ ಮತ್ತು ಲಾಕರ್ ಹಾಗೂ ಲಾಕರ್‌ನಲ್ಲಿದ್ದ ಸುಮಾರು 2,88,000 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ ಮಹೀಂದ್ರ ಕಂಪನೀಯ ಬೊಲೇರೊ ಪಿಕಪ್ ವಾಹನವನ್ನು ಕೂಡ ಸ್ವಾಧೀನ ಪಡಿಸಿಕೊಂಡಿದ್ದಾರೆ. ಆರೋಪಿಯಿಂದ ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 6.50 ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ.

Previous articleಮೀನುಗಾರರ ಸಹಾಯ ಪಡೆಯಲಿದೆ ಸೇನೆ
Next articleಆಲಮಟ್ಟಿ-ತುಂಗಭದ್ರಾ ಜಲಾಶಯಕ್ಕೆ ಬಿಗಿಭದ್ರತೆ