Home ತಾಜಾ ಸುದ್ದಿ ಹೆದ್ದಾರಿಯಲ್ಲೇ ಮಗುಚಿಬಿದ್ದ ಲಾರಿ

ಹೆದ್ದಾರಿಯಲ್ಲೇ ಮಗುಚಿಬಿದ್ದ ಲಾರಿ

0
ಹೆದ್ದಾರಿಯಲ್ಲೇ ಮಗುಚಿಬಿದ್ದ ಲಾರಿ

ಕುಳಗೇರಿ ಕ್ರಾಸ್: ಗ್ರಾಮದ ರಾಷ್ಟ್ರೀಯ ಹೆದ್ದಾರಿ ೨೧೮ರಲ್ಲಿ ಮಂಗಳೂರಿಗೆ ತೆರಳುತ್ತಿದ್ದ ಗೋದಿ ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಖಾನಾಪೂರ ಖಣಿವೆಯ ಕೆಳಗೆ ಹೆದ್ದಾರಿಯಲ್ಲೇ ಮಗುಚಿಬಿದ್ದ ಘಟನೆ ಶನಿವಾರ ಸಾಯಂಕಾಲ ನಡೆದಿದೆ.
ಮಹಾರಾಷ್ಟ್ರಕ್ಕೆ ಸೇರಿದ ಎಮ್‌ಎಚ್೪೦. ಸಿಡಿ೭೭೫೫. ನಂಬರಿನ ಪಲ್ಟಿಯಾದ ಲಾರಿ. ಚಾಲಕನಿಗೆ ಪೆಟ್ಟಾಗಿದ್ದು ಸ್ಥಳಕ್ಕೆ ದಾವಿಸಿದ ಪೊಲೀಸರು ಚಾಲಕನನ್ನ ೧೦೮ ಅಂಬ್ಯೂಲೆನ್ಸ್ ವಾಹನದಲ್ಲಿ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.
ಅದೃಷ್ಟ್‌ ವಶಾತ್ ಲಾರಿ ಬಿದ್ದ ಸ್ಥಳದಲ್ಲಿ ಯಾರು ಇರದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಬಾದಾಮಿ ಪಿಎಸ್‌ಐ ವಿಠಲ್ ನಾಯಕ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಎಎಸ್ಐ ಎಸ್ ಬಿ ಅಮಲಿಹಾಳ ಸಿಬ್ಬಂದಿ ಇದ್ದರು.