ಸಿದ್ದು ಡಿಎನ್ಎ ಪರೀಕ್ಷಿಸಬೇಕು: ಮುತಾಲಿಕ್

0
20
ಮುತಾಲಿಕ


ಬಾಗಲಕೋಟೆ: ಬಹಿರಂಗವಾಗಿ ತಾವೊಬ್ಬ ಹಿಂದೂ ವಿರೋಧಿ ಎಂದು ಹೇಳಿಕೊಳ್ಳುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಡಿಎನ್ಎ ಟೆಸ್ಟ್ ಮಾಡಿಸಬೇಕೆಂದು ಶ್ರೀರಾಮ ಸೇನೆ‌ ಮುಖ್ಯಸ್ಥ ಪ್ರಮೋದ ‌ಮುತಾಲಿಕ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಕೆರೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಪೊಲೀಸರು- ಹಿಂದೂ ಕಾರ್ಯಕರ್ತರ ಘರ್ಷಣೆ ಹಿನ್ನೆಲೆ ರಾಚೋಟೇಶ್ವರ ದೇವಸ್ಥಾನದಲ್ಲಿ ಯುವಕರನ್ನು ಭೇಟಿ ಮಾಡಿದ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಚಿವುಟಿ ನೋಡಿದರೂ ರಕ್ತ ಕೆಂಪಾಗಿರುವುದಿಲ್ಲ. ಅದು ಕೂಡ ಹಸಿರಾಗಿದೆ. ಅವರ ಹುಟ್ಟಿನ‌ ಮೂಲ ತಿಳಿಯಬೇಕು ಅದು ಔರಂಗಜೇಬನದ್ದೋ ಅಥವಾ ಘಜನಿಯದ್ದೋ ಎಂಬುದನ್ನು ನೋಡಬೇಕಿದೆ ಎಂದು ಹೇಳಿದ್ದಾರೆ.

Previous articleಪ್ರತಿಭಟನೆ ಮಾಡಿದ್ದ ಏಳು ಮಂದಿ ಪಿಎಫ್ಐ ಮುಖಂಡರು ಪೊಲೀಸರ ವಶಕ್ಕೆ
Next articleಸಿಪಿಐ ಮೇಲೆ ಹಲ್ಲೆ ಪ್ರಕರಣ: 8 ಜನರ ಬಂಧನ