ಮೈಸೂರು: ಮೈಸೂರಿನಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಉದಯಗಿರಿ ಪೊಲೀಸ್ ಠಾಣೆ ಹತ್ತಿರ ಸುದ್ದಿಗಾರರೊಂದಿಗೆ ಮಾತನಾಡಿ ನಗರದ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲುತೂರಾಟದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು ಯಾರೋ ವಾಟ್ಸ್ಯಾಪ್‌ನಲ್ಲಿ ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಮತ್ತು ಅಖಿಲೇಶ್ ಯಾದವ್ ಅವರ ಫೋಟೋಗಳನ್ನು ಹಾಕಿ 3 ಈಡಿಯಟ್ಸ್ ಎಂದು ಬರೆದಿರುವುದಕ್ಕೆ ರೊಚ್ಚಿಗೆದ್ದ ಕೆಲ ಮುಸಲ್ಮಾನ ಪುಂಡರು ಪೊಲೀಸ್ ಠಾಣೆಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ, ಪೋಸ್ಟ್ ಹಾಕಿದವರನ್ನು ಅರೆಸ್ಟ್ ಮಾಡಿದ್ದಾಗಿ ಪೊಲೀಸರು ಹೇಳಿದರೂ ಕಲ್ಲು ತೂರಾಟವನ್ನು ಪುಂಡರು ನಿಲ್ಲಿಸಿಲ್ಲ, ಉದಯಗಿರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಕೆಲಸ ಕಳೆದ 15 ವರ್ಷಗಳಿಂದ ನಡೆಯುತ್ತಿದೆ, ಪೊಲೀಸರನ್ನೇ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಈಗಲೂ ಅದೇ ಮುಂದುವರಿದಿದೆ. ಟಿಪ್ಪು ಸಂತತಿ ಮಾಡಿರುವ ಗಲಾಟೆ ಇದಾಗಿದೆ. ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುವುದಕ್ಕೆ ಇದು ಸಾಕ್ಷಿ. ಸಿದ್ದರಾಮಯ್ಯ ಅವರದ್ದು ತಾಲಿಬಾನಿ ಸರ್ಕಾರ. ಪೊಲೀಸರು ಆಳುವ ಸರ್ಕಾರದ ಅಣತಿಯಂತೆ ನಡೆಯುವುದು ಮೊದಲು ಬಿಡಬೇಕು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಸ್ಲಿಂ ಪುಂಡರಿಗೆ ಕಾನೂನು ಕೈಗೆತ್ತಿಕೊಳ್ಳಲು ಲೈಸೆನ್ಸ್ ಕೊಟ್ಟಂತಾಗಿದೆ. ಏನು ಮಾಡಿದ್ರೂ ಸಿದ್ದರಾಮಯ್ಯ ನಮ್ಮನ್ನು ಕಾಪಾಡುತ್ತಾರೆ ಎಂಬ ನಂಬಿಕೆಯಿದೆ. ಸಿದ್ದರಾಮಯ್ಯನವರೇ ಈ ವಿಚಾರದಲ್ಲಿ ರಾಜಕೀಯ ಬಿಟ್ಟು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಿ. ದಾಂಧಲೆ ನಡೆಸಿದವರನ್ನು ಅವರು ಹೆಡೆಮುರಿ ಕಟ್ಟುತ್ತಾರೆ ಎಂದರು.