Home ತಾಜಾ ಸುದ್ದಿ ಸಂಭ್ರಮದ ಸಂಗಮೇಶ್ವರ ರಥೋತ್ಸವ

ಸಂಭ್ರಮದ ಸಂಗಮೇಶ್ವರ ರಥೋತ್ಸವ

0
oplus_131074

ಕೂಡಲಸಂಗಮ: ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಅಪಾರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಶುಕ್ರವಾರ ಸಂಜೆ ನೆರವೇರಿತು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ನವೀಕರಣಗೊಂಡ ರಥವನ್ನು ಎಳೆದು ಸಂಭ್ರಮಪಟ್ಟರು. ರಥೋತ್ಸವಕ್ಕೂ ಪೂರ್ವದಲ್ಲಿ ಗಂಜಿಹಾಳದಿಂದ ತಳಿರು ತೋರಣ, ನಂದಿಕೋಲಿನ ಕುಣಿತ, ಬಾಳೆಕಂಬದ ಮೆರವಣಿಗೆ, ಬೆಳಗಲ್ಲದಿಂದ ರಥೋತ್ಸವದ ಹಗ್ಗ, ಇದ್ದಲಗಿಯ ಹಿಲಾಲ, ಗುಳೇದಗುಡ್ಡದ ಹುಚ್ಚಯ್ಯನ ಕಳಸ ಮುಂತಾದವುಗಳನ್ನು ಗಂಜಿಹಾಳ, ಇದ್ದಲಗಿ, ಬೆಳಗಲ್ಲ, ಕೆಂಗಲ್ಲ, ಕಜಗಲ್ಲ, ಗುಳೆದಗುಡ್ಡದ ಭಕ್ತರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ನಲ್ಲಿ ಮೆರವಣಿಗೆ ಮೂಲಕ ಸುಕ್ಷೇತ್ರಕ್ಕೆ ತಂದಾಗ ಭಕ್ತರ ಜಯಘೋಷಗಳು ಮುಗಿಲು ಮುಟ್ಟಿದ್ದವು.
ರಥೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಮುಂತಾದವರು ಇದ್ದರು.

Exit mobile version