Home ಅಪರಾಧ ಬಾವಿಗೆ ಬಿದ್ದು ಮಹಿಳೆ ಸಾವು

ಬಾವಿಗೆ ಬಿದ್ದು ಮಹಿಳೆ ಸಾವು

0

ಗೋಕರ್ಣ: ಕುಡಿಯುವ ನೀರು ತರಲು ಹೋದ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ಮಾದನಗೇರಿಯಲ್ಲಿ ನಡೆದಿದೆ.
ದರ್ಶನಾ ನಾಯ್ಕ (30) ಸಾವನ್ನಪ್ಪಿದ ಮಹಿಳೆಯಾಗಿದ್ದು, ಇವರು ಮೂರ್ಚೆ ರೋಗಕ್ಕೆ ಒಳಗಾಗಿದ್ದರು. ಇದರಿಂದ ಮಾನಸಿಕವಾಗಿ ಸಹ ಅವರು ಕುಗ್ಗಿದ್ದರು ಎನ್ನಲಾಗಿದೆ. ಶುಕ್ರವಾರ ಮಾದನಗೇರಿಯ ವಿಜಯಬಾಯಿ ಪೈ ಅವರ ಮನೆ ಬಳಿ ದರ್ಶನಾ ನಾಯ್ಕ ಅವರು ತೆರಳಿದ್ದರು. ಅಲ್ಲಿನ ಬಾವಿಯಿಂದ ನೀರು ಮೇಲೆತ್ತುವಾಗ ಆಕಸ್ಮಿಕವಾಗಿ ಅವಘಡ ನಡೆದಿದೆ. ಈ ಬಗ್ಗೆ ದರ್ಶನಾ ನಾಯ್ಕ ಅವರ ಸಹೋದರ ಲೋಹಿತ ನಾಯ್ಕ ಪೊಲೀಸರಿಗೆ ತಿಳಿಸಿ, ಪ್ರಕರಣ ದಾಖಲಿಸಿದ್ದಾರೆ.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Exit mobile version