ಸಂಗಮೇಶ್ ಪುತ್ರನ ಒದ್ದು ಒಳಗೆ ಹಾಕಿ

0
18

ದಾವಣಗೆರೆ: ಶಾಸಕ ಸಂಗಮೇಶ್ ಪುತ್ರ ಮಹಿಳಾ ಅಧಿಕಾರಿಗೆ ಅವಾಚ್ಯವಾಗಿ ನಿಂದನೆ ಪ್ರಕರಣದಲ್ಲಿ ಸಂಗಮೇಶ್ ಪುತ್ರನನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು ಎಂದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರದಲ್ಲಿರುವ ಜನಪ್ರತಿನಿಧಿಗಳ ಮಕ್ಕಳು ಹೀಗೆ ಸೊಕ್ಕಿನಿಂದ ವರ್ತನೆ ಮಾಡುತ್ತಾರೆ. ಡಿಸಿ, ಎಸ್‌ಪಿ ಸೇರಿದಂತೆ ಹಲವು ಅಧಿಕಾರಿಗಳ ಮೇಲೆ ದರ್ಪ ತೋರುತ್ತಿದ್ದಾರೆ. ಕೂಡಲೇ ಹೀಗೆ ದರ್ಪ ತೋರಿದವರನ್ನು ಒದ್ದು ಒಳಗೆ ಹಾಕಬೇಕು. ಸಂಗಮೇಶ್ ಪುತ್ರ ಒಬ್ಬ ಮಹಿಳಾ ಅಧಿಕಾರಿ ಮೇಲೆ ದರ್ಪ ತೋರಿಸಿದ್ದು ಖಂಡನೀಯ. ಆತನ ಮೇಲೆ ಅಲ್ಲ ಕೂಡಲೇ ಶಾಸಕನ ಮೇಲೆಯೇ ಕ್ರಮವಾಗಬೇಕು. ಈ ರೀತಿ ವರ್ತನೆಗೆ ಅ ಶಾಸಕನ ಕುಮ್ಮಕ್ಕು ಕಾರಣ ಎಂದರು.

Previous articleಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಶಿಕ್ಷೆ
Next articleಇಬ್ಬರು ನದಿ ನೀರು ಪಾಲು