ನವದೆಹಲಿ: ವಂದೇ ಮೆಟ್ರೋ, ವಂದೇ ಸ್ಲೀಪರ್ಸ್ ಪರೀಕ್ಷೆ ನಡೆಯುತ್ತಿದೆ, ಇದು ಪ್ರಯಾಣಿಕರ ದೂರದ ಪ್ರಯಾಣಕ್ಕೆ ಅನೂಕೂಲವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ
ಅಧಿವೇಶನದಲ್ಲಿ ಮಾತನಾಡಿರುವ ಅವರು ಯೋಜನೆಯ ಕುರಿತು ಈ ರೈಲುಗಳು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಅನೂಕೂಲದಾಯಕವಾಗಿರಲಿವೆ, ದೂರದ ಪ್ರಯಾಣದ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಂದೇ ಪರ್ ರೈಲುಗಳ ಒಳನೋಟಗಳನ್ನು ಅವರು ಹಂಚಿಕೊಂಡಿದ್ದಾರೆ. ವಂದೇ ಮೆಟ್ರೋ ಮತ್ತು ವಂದೇ ಸ್ಲೀಪರ್ ರೈಲುಗಳು ಪ್ರಯಾಣಿಕರಿಗೆ ಮತ್ತು ದೂರದ ಪ್ರಯಾಣಿಕರಿಗೆ ಪ್ರಯಾಣದಲ್ಲಿ ಕ್ರಾಂತಿಯನ್ನುಂಟುಮಾಡಲು ಸಿದ್ಧವಾಗಿವೆ ಎಂದು ಅವರು ಹೇಳಿದರು.
