Home ನಮ್ಮ ಜಿಲ್ಲೆ ಧಾರವಾಡ `ವೃಕ್ಷ’ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ

`ವೃಕ್ಷ’ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ

0

ಹುಬ್ಬಳ್ಳಿ: ಕೇಶ್ವಾಪುರದ ಶಾಂತಿನಗರ ಸುಳ್ಳ ರಸ್ತೆಯ ಇನ್‌ಫೆಂಟ್ ಜೀಸಸ್ ಚರ್ಚ್ ಹತ್ತಿರ ಮಹಾವೀರ ಕಾಲೋನಿಯಲ್ಲಿ ಶಿವಯೋಗಿ ವಿ. ಗದಗಿಮಠ ಎಜ್ಯುಕೇಶನ್ ಟ್ರಸ್ಟ್ ಹುಬ್ಬಳ್ಳಿ ವತಿಯಿಂದ ಆರಂಭಿಸಿದ ವೃಕ್ಷ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನೆ ಸಮಾರಂಭ ರವಿವಾರ ಜರುಗಿತು.
ಉದ್ಘಾಟನೆ ನೆರವೇರಿಸಿದ ಚಿಕ್ಕೋಡಿಯ ಸಿ.ಎಲ್.ಇ ಸೊಸೈಟಿ ಗೌರವ ಕಾರ್ಯದರ್ಶಿ ಜಗದೀಶ ಕವಟಗಿಮಠ ಮಾತನಾಡಿ, ಚಿಕ್ಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ಜನ್ಮತಾಳಿದ ವೃಕ್ಷ ಬೃಹತ್ ವೃಕ್ಷವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸಂಸ್ಕಾರ ಶಾಲೆ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ ಆಗಮಿಸಿದ್ದರು.
ಸಂಸ್ಥೆಯ ಅಧ್ಯಕ್ಷ ಶಿವಯೋಗಿ ವಿ. ಗದಗಿಮಠ, ಉಪಾಧ್ಯಕ್ಷೆ ಅಕ್ಷತಾ ಗದಗಿಮಠ, ಗೌರವ ಕಾರ್ಯದರ್ಶಿ ಜಗದೀಶ ಅಡವಿಮಠ, ಬಸವರಾಜ ಗದಗಿಮಠ, ಮಣಿಕಂಠ ಗದಗಿಮಠ ಸೇರಿದಂತೆ ಇತರ ಸದಸ್ಯರು, ಆಕ್ಸಫರ್ಡ್ ಕಾಲೇಜಿನ ಚೇರಮನ್ ವಸಂತ ಹೊರಟ್ಟಿ, ವಾಣಿ ಆನಂದ ಸಂಕೇಶ್ವರ, ಸಂಯುಕ್ತ ಕರ್ನಾಟಕ ಕಾರ್ಯನಿರ್ವಾಹಕ ಸಂಪಾದಕ, ಸಿಇಓ ಮೋಹನ ಹೆಗಡೆ, ಹಿರಿಯ ಪತ್ರಕರ್ತ ಗಣಪತಿ ಗಂಗೊಳ್ಳಿ, ಉದ್ಯಮಿಗಳಾದ ಬಾಬುಲಾಲ್ ಪಾರೀಖ್, ಗೌತಮ ಬಾಫಣಾ, ಗೌತಮಚಂದ ಗುಲೇಚಾ, ಕಾಂತಿಲಾಲ ಬೋಹರಾ, ಸುಧೀರ ವೋರಾ, ಉಜ್ವಲ ಸಿಂಘಿ, ಮಾರುತಿ ಕೋಟೇಕರ, ಅಳಗುಂಡಗಿ ಸೇರಿದಂತೆ ನೂರಾರು ಗಣ್ಯರು ಈ ಸಂದರ್ಭದಲ್ಲಿದ್ದರು.
ವೃಕ್ಷ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಪ್ಲೆ ಗ್ರುಪ್, ನರ್ಸರಿ, ಎಲ್‌ಕೆಜಿ, ಯುಕೆಜಿ ವಿಭಾಗಗಳಿದ್ದು, ೨ ವರ್ಷದ ಮಕ್ಕಳಿಂದ ೫ ವರ್ಷದ ಮಕ್ಕಳಿಗೆ ಪ್ರವೇಶ ನೀಡಲಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾಗುವ ಸೌಲಭ್ಯ ಹೊಂದಿದೆ.

Exit mobile version