Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ಕ್ಯಾಸಿನೋ ಉದ್ಯಮಿ‌ ಮನೆ ಮೇಲೆ ಇಡಿ ದಾಳಿ

ಹುಬ್ಬಳ್ಳಿ: ಕ್ಯಾಸಿನೋ ಉದ್ಯಮಿ‌ ಮನೆ ಮೇಲೆ ಇಡಿ ದಾಳಿ

0

ಹುಬ್ಬಳ್ಳಿ : ಹುಬ್ಬಳ್ಳಿ ನಗರದಲ್ಲಿ ಬೆಳ್ಳಂ ಬೆಳಗ್ಗೆ ಇಡಿ ದಾಳಿ ಮಾಡಿದ್ದು, ಉದ್ಯಮಿ ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ನಿವಾಸದ ಮೇಲೆ ದಾಳಿ ಮಾಡಿರುವ 15 ಜನ ಅಧಿಕಾರಿಗಳ ತಂಡ ಪರಿಶೀಲನೆ‌ ನಡೆಸುತ್ತಿದೆ.‌ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ ಮೇಲೆ ದಾಳಿ‌ಮಾಡಿರುವ ತಂಡ, ಅಪಾರ್ಟ್ಮೆಂಟ್ ನ 401, 402, ಮನೆಯ ಮೇಲೆ‌ ದಾಳಿ ಮಾಡಿದೆ. ಐದನೇ ಮಹಡಿಯಲ್ಲಿ ಸಮುಂದರ್ ಸಿಂಗ್ ಹಾಗು ಆತನ ಸಹೋದರ ಮನೆ ಇದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಸಮುದಂರ್ ಸಿಂಗ್ ಗೋವಾದಲ್ಲಿ ಮೆಜೆಸ್ಟಿಕ್ ಫ್ರೈಡ್ ಕ್ಯಾಸಿನೊ ನಡೆಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿ ಗೇಮ್ ಆಫ್ ಹಾಗು ಕ್ಯಾಸಿನೊ ವ್ಯವಹಾರ ನಡೆಸುತ್ತಿರುವ ಸಮುಂದರ್ ಸಿಂಗ್ ಇತ್ತೀಚೆಗೆ ಅದ್ದೂರಿಯಾಗಿ ಪುತ್ರನ ವಿವಾಹ ಮಾಡಿದ್ದರು. ಸಮುಂದರ್ ಸಿಂಗ್ ಗೋವಾ, ಶ್ರೀಲಂಕಾ, ದುಬೈನಲ್ಲಿ ಕ್ಯಾಸಿನೊ ಉದ್ಯಮ ನಡೆಸುತ್ತಿದ್ದಾರೆ‌. 15 ಜನ ಅಧಿಕಾರಿಗಳ ತಂಡದಿಂದ ಏಕಕಾಲದಲ್ಲಿ ದಾಳಿ ನಡೆಸಿ ವಿವಿಧ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಕಳೆದ‌ ಮಧ್ಯರಾತ್ರಿ ಗೋವಾದಿಂದ ಹುಬ್ಬಳ್ಳಿ ಬಂದಿದ್ದ ಸಮುಂದರ್ ಸಿಂಗ್‌ಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version