Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಮಮತಾ ಫಾರ್ಮ್ ಹೌಸ್ ನಲ್ಲಿ ದರೋಡೆ, 15 ಆರೋಪಿಗಳ ಬಂಧನ

ಧಾರವಾಡ: ಮಮತಾ ಫಾರ್ಮ್ ಹೌಸ್ ನಲ್ಲಿ ದರೋಡೆ, 15 ಆರೋಪಿಗಳ ಬಂಧನ

0

ಧಾರವಾಡ: ತಾಲೂಕಿನ ದಡ್ಡಿ ಕಮಲಾಪುರದ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಮಮತಾ ಫಾರ್ಮ್ ಹೌಸ್ ನಲ್ಲಿ ನಡೆದ ದರೋಡೆಗೆ ಸಂಬಂಧಿಸಿದಂತೆ‌ 15 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಸ್ಟ್ 13 ರಂದು ನಸುಕಿನಲ್ಲಿ ಫಾರ್ಮ್ ಹೌಸ್ ಗೆ ನುಗ್ಗಿದ 8-10 ಜನ ದರೋಡೆಕೋರರ ತಂಡ ನೌಕರರನ್ನು ಕಟ್ಟಿಹಾಕಿ ಅವರ ಮೊಬೈಲ್ ಕಸಿದುಕೊಂಡು ಪರಾರಿಯಾಗಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮೀಣ ಠಾಣೆ ಪೊಲೀಸರಿಗೆ ಸೂಚಿಸಿದ್ದರು.

ದರೋಡೆಕೋರರ ಪತ್ತೆಗಾಗಿ 8 ತಂಡಗಳನ್ನು ರಚನೆ ಮಾಡಲಾಗಿತ್ತು. ಪ್ರಕರಣ ದಾಖಲಾದ 4 ದಿನಗಳಲ್ಲಿ ಬಳ್ಳಾರಿ, ರಾಯಚೂರು, ವಿಜಯನಗರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ಜಿಲ್ಲೆಗಳಲ್ಲಿ 15 ಆರೋಪಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ.

ಕೃತ್ಯಕ್ಕೆ ಬಳಸಿದ 15 ಮೊಬೈಲ್ ಗಳು, 7 ವಾಹನಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅರೋಪಿಗಳು ಈ ಪ್ರಕರಣದಲ್ಲಿ ಮೊಬೈಲ್ ಜಾಮರ್ ಬಳಕೆ ಮಾಡಿದ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ನಡೆದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version