Home ಅಪರಾಧ ವಿಧಾನಸಭಾ ಚುನಾವಣೆ: ಕುರುಡು ಕಾಂಚಾಣದ ಜೊತೆ ಗಾಂಜಾ ಸದ್ದು

ವಿಧಾನಸಭಾ ಚುನಾವಣೆ: ಕುರುಡು ಕಾಂಚಾಣದ ಜೊತೆ ಗಾಂಜಾ ಸದ್ದು

0

ಕಲಬುರಗಿ: ಕಲಬುರಗಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾ ಜಪ್ತಿ‌ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್‌ನಲ್ಲಿ ಸ್ಕೂಲ್ ಬ್ಯಾಗ್ ನಲ್ಲಿ ಗಾಂಜಾ ಪೂರೈಸುತ್ತಿದ್ದ ಆರೋಪಿ ಆಗಿರುವ ಸೈಯದ್ ಅಬ್ದುಲ್ ಮನಾನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಕೆ ಕೆ ಆರ್ ಟಿ ಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಬ್ಯಾಗ್ ನಲ್ಲಿ 8 ಕೆಜಿ ಗಾಂಜಾ ಇಟ್ಟುಕೊಂಡಿದ್ದ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ವೇಳೆ ಗಾಂಜಾ ಪತ್ತೆ ಮಾಡಲಾಗಿದೆ. ಬೀದರ್ ನಿಂದ ಖರೀದಿಸಿಕೊಂಡು ಕಲಬುರಗಿಗೆ ತೆಗೆದುಕೊಂಡು ಬರುತ್ತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version