ಮಸೀದಿ ಉದ್ಘಾಟಿಸಿದ ಗವಿಶ್ರೀ

0
23

ಕುಷ್ಟಗಿ: ಸಾಮಾಜಿಕ ಸ್ವಾಸ್ಥ್ಯ, ಸೌಹಾರ್ದತೆ, ಭಾವೈಕ್ಯತೆ, ಸಾಮರಸ್ಯವು ಉತ್ತಮ ಸಮಾಜದ ಆಧಾರ ಸ್ತಂಭಗಳು. ಸಮಾಜ ಜೀವಿಯಾದ ಮನುಷ್ಯ ಸಾಮಾಜಿಕ ಪರೋಪಕಾರ ಪ್ರಜ್ಞಾಯೊಂದಿಗೆ ಬದುಕಿದಾಗ ಮಾತ್ರ ಒಂದು ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಿದೆ ಎಂದು ಕೊಪ್ಪಳದ ಅಭಿನವ ಗವಿಶ್ರೀ ಹೇಳಿದರು.
ಪಟ್ಟಣದ ಮುಲ್ಲಾರ ಓಣಿಯ ಹುಸೇನ್ ಭಾಷಾ ಅಶುರ್ಖಾನ ಮಸೀದಿಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಧರ್ಮ, ಜಾತಿ, ಮತ ಲಿಂಗ, ಬಣ್ಣ ಆಕಾರಗಳಿಂದ ಬೇರೆ ಬೇರೆಯಾದರೂ ಆತನೊಳಗಿನ ಜೀವಸೆಲೆ ಒಂದೇ ಆಗಿದೆ. ಭಾರತ ಸರ್ವಶ್ರೇಷ್ಠವಾದ ನೆಲ, ವೈವಿಧ್ಯಮಯ ಸಂಸ್ಕೃತಿಯ ಬಿಡು, ಹಲವು ಜಾತಿ-ಧರ್ಮಗಳಿದ್ದರೂ ಏಕತೆ ಭಾವೈಕತೆಯನ್ನ ಮೆರೆಯುವ ರಾಷ್ಟ್ರ, ಪರಸ್ಪರ ಪ್ರೀತಿ ಸ್ನೇಹ ಬಂಧುತ್ವದಿಂದ ಮನುಷ್ಯನ ಬದುಕು, ಸುಂದರವಾಗಲು ಸಾಧ್ಯವಿದೆ ಎಂದರು.

Previous article20 ವರ್ಷಗಳ ಬಳಿಕ ಗ್ರಾಮಕ್ಕೆ ಬಸ್‌: ಗ್ರಾಮಸ್ಥರಲ್ಲಿ ಸಂಭ್ರಮ
Next articleಶಿವಮೊಗ್ಗ ವಿಮಾನ ನಿಲ್ದಾಣ: ಆ.31ರಿಂದ ವಿಮಾನ ಹಾರಾಟ ಆರಂಭ