ಬೆಂಬಲ ಬೆಲೆಗೆ ರೈತರ ಆಗ್ರಹ

0
18
kabbu

ಬಾಗಲಕೋಟೆ: ಕಬ್ಬಿಗೆ ಕನಿಷ್ಠ 5500 ರೂ.ಗಳ ಬೆಂಬಲ ಬೆಲೆ ನಿಗದಿ ಆಗುವವರೆಗೆ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಕಬ್ಬು‌ ನುರುಸುವಿಕೆಯನ್ನು ಆರಂಭಿಸಬಾರದು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ನಡೆಸಿದ ಸಭೆಯಲ್ಲಿ ರೈತರು ಆಗ್ರಹಿಸಿದ್ದಾರೆ.
ಜಮಖಂಡಿ ಶುಗರ್ಸ್, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ರನ್ನ ಸಕ್ಕರೆ ಕಾರ್ಖಾನೆಗಳು ಕಬ್ಬು ನುರುಸುವಿಕೆಯನ್ನು ಆರಂಭಿಸಿದ್ದು, ರೈತರಿಗೆ ಬೆಂಬಲ ಬೆಲೆ ನಿಗದಿ ಆಗುವವರೆಗೂ ಅದಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.
ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಬೆಲೆ ನಿಗದಿ ಸರ್ಕಾರದ ಕೈಯಲ್ಲಿದೆ. ಎರಡ್ಮೂರು ದಿನದಲ್ಲಿ ಸರ್ಕಾರ ಈ ಬಗ್ಗೆ ತೀರ್ಮಾನಕ್ಕೆ ಬರಲಿದೆ. ಅಲ್ಲಿಯವರೆಗೂ ರೈತರು ಸಮಾಧಾನದಿಂದ ಕಾಯಬೇಕೆಂದು ಹೇಳಿದರು.
ಈಗಾಗಲೇ ಕಾರ್ಖಾನೆಗಳು ನುರುಸುವಿಕೆ ಆರಂಭಿಸಿದರೆ ನಿಲ್ಲಿಸುವಂತೆ ಸೂಚಿಸುವೆ ಆದರೆ ಸರ್ಕಾರದಿಂದ ಆದೇಶ ಬರುವವರೆಗೂ ಕಾಯಬೇಕೆಂದು ಹೇಳಿದರು.

Previous articleಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ
Next articleಹಾಸ್ಟಲ್ ನಲ್ಲಿ ಚಿತ್ರಾನ್ನ ಸೇವಿಸಿದ 40 ಕಾಲೇಜು ವಿಧ್ಯಾರ್ಥಿಗಳಿಗೆ ಫುಡ್ ಪಾಯ್ಸನ್