ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ…

0
30

ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ!!

ಬೆಂಗಳೂರು: ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗ್ರೇಟರ್‌ ಬೆಂಗಳೂರು ವಿಧೇಯಕ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ!!, 75 ವರ್ಷದಿಂದ ಇದನ್ನೇ ಮಾಡಿದೆ, ಮುಂದುವರಿಸಿದೆ. ಕಾಂಗ್ರೆಸ್ ನೀತಿಯೇ Divide and Rule.

ಅಂದು: ಅಖಂಡ ಭಾರತವನ್ನು ಹೋಳು ಮಾಡಿತು! ಇಂದು: ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ!! ದುರುದ್ದೇಶವಿಷ್ಟೇ; ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದು. ಗ್ರೇಟರ್‌ ಬೆಂಗಳೂರು ಹೆಸರಿಗಷ್ಟೇ. ಲೂಟರ್‌ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ..

ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ!! ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್‌ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ!! ಎಂದಿದ್ದಾರೆ.

Previous articleನಿರ್ಜನ ಪ್ರದೇಶದಲ್ಲಿ ಪತ್ತೆಯಾದ ನವಜಾತ ಶಿಶು
Next articleಹಂಪಿ: ಪೊಲೀಸ್ ಸಬ್ ಡಿವಿಷನ್ ಪುನಃ ತೆರೆಯಲು ಮನವಿ