ಬಿಎಸ್ವೈ ಮೊಬೈಲ್‌ ಸ್ವಿಚ್‌ ಆಫ್‌ ಆದ್ರೆ 50 ಸೀಟು ಬರಲ್ಲ

0
21
ಎಂ ಪಿ ಕುಮಾರಸ್ವಾಮಿ

ಬೆಂಗಳೂರು: ಯಡಿಯೂರಪ್ಪ ಅವರನ್ನು ನಾನು ಕೇಳಿಕೊಳ್ತೇನೆ ನೀವು ಮೊಬೈಲ್‌ ಸ್ವಿಚ್ ಆಫ್ ಮಾಡಿ. ನೀವು ಸ್ವಿಚ್ ಆಫ್ ಮಾಡಿದರೆ ಬಿಜೆಪಿ 50 ಸೀಟ್ ಸಹ ಗೆಲ್ಲೋದಿಲ್ಲ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಈ ನಡೆಯನ್ನು ನಾನು ನಿರೀಕ್ಷೆ ಮಾಡಿದ್ದೆನು. ಬಿಜೆಪಿ ಹೈ ಕಮಾಂಡ್‌ನಿಂದ ನನಗೆ ಟಿಕೆಟ್ ಕೈ ತಪ್ಪಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯೇ ಮುಖ್ಯ ಕಾರಣವಾಗಿದ್ದಾರೆ. ಸಿಟಿ ರವಿ ವೈಯುಕ್ತಿಕ ದ್ವೇಷದಿಂದ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಸಿಟಿ ರವಿ ಪಕ್ಷಕ್ಕೆ ಒಳೆಯದು ಮಾಡೋದಿಲ್ಲ. ಬಿಜೆಪಿ ಮುಗಿಸುವವರೆಗೆ ಸಿ.ಟಿ. ರವಿ ವಿಶ್ರಾಂತಿ ಪಡೆಯಲ್ಲ. ನಾನು ರೈತರ ಪರವಾಗಿ ಪ್ರತಿಭಟನೆ ಮಾಡಿದ್ದೆ, ಅವರಿಗೆ ಪರಿಹಾರ ಕೊಡಿಸುವಲ್ಲಿಯೂ ನಾನು ಸಫಲನಾಗಿದ್ದೆ ಅದನ್ನು ಹೈಕಮಾಂಡ್ ಗೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾನೇನು ರಾಜಕೀಯದಲ್ಲಿ ಸನ್ಯಾಸಿ ಅಲ್ಲ. ನಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ

Previous articleಪಾಕ್‌ನ ಡ್ರೋನ್ ಹೊಡೆದುರುಳಿಸಿದ ಭದ್ರತಾ ಪಡೆ
Next articleಶುಕ್ರವಾರವೇ ಪಟ್ಟಿ ಬಿಡುಗಡೆ