ಪುತ್ತಿಗೆ ಎರುಗುಂಡಿ ಫಾಲ್ಸ್: ಪ್ರವಾಸಿಗರ ರಕ್ಷಣೆ

0
29

ಮೂಡುಬಿದಿರೆ : ಮಳೆಗಾಲದಲ್ಲಿ ಅಪಾಯಕಾರಿ ಪ್ರವಾಸಿತಾಣವಾಗಿರುವ ಪುತ್ತಿಗೆ ಗ್ರಾ. ಪಂ. ವ್ಯಾಪ್ತಿಯಲ್ಲಿರುವ ಎರುಗುಂಡಿ ಫಾಲ್ಸ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ ಘಟನೆ ಭಾನುವಾರ ನಡೆದಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಎರುಗುಂಡಿ ಫಾಲ್ಸ್‌ನಲ್ಲಿ ನೀರು ತುಂಬಿ ರಭಸವಾಗಿ ಹರಿಯುತ್ತಿತ್ತು ಇದನ್ನು ವೀಕ್ಷಿಸಲು ಬಂದಿದ್ದ ಪ್ರವಾಸಿಗರು ನೀರಿನಲ್ಲಿ ಆಟವಾಡಲು ಇಳಿದಿದ್ದಾರೆ ಆಗ ನೀರಿನ ರಭಸಕ್ಕೆ ಸಿಲುಕಿದ್ದಾರೆ. ಇದನ್ನು ಕಂಡ ಸ್ಥಳೀಯರು ಹಗ್ಗದ ಮೂಲಕ ಇನ್ನೊಂದು ಬದಿಗೆ ಬರುವಂತೆ ಮಾಡಿ ರಕ್ಷಿಸಿದ್ದಾರೆ. ಎರುಗುಂಡಿ ಫಾಲ್ಸ್ ಅಪಾಯಕಾರಿಯಾಗಿದ್ದು ಇಲ್ಲಿ ಈ ಹಿಂದೆ ಬಂದಿದ್ದ ಪ್ರವಾಸಿಗರಲ್ಲಿ ಕೆಲವರು ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.

Previous articleಹವಾಮಾನ ವೈಪರೀತ್ಯ: ಬೆಂಗಳೂರಿಗೆ ವಾಪಾಸ್ ಆದ ರಾಜ್ಯಪಾಲರು
Next articleಮಳೆಯಿಂದಾಗುವ ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ