Home ನಮ್ಮ ಜಿಲ್ಲೆ ಕಲಬುರಗಿ ನಿತಿನ್‌ಗೆ ಮನವೊಲಿಸುವೆ

ನಿತಿನ್‌ಗೆ ಮನವೊಲಿಸುವೆ

0

ಕಲಬುರಗಿ: ಅಫಜಲಪುರ ಕ್ಷೇತ್ರದಿಂದ ನನಗೆ ಬಿಜೆಪಿ‌ ಟಿಕೆಟ್ ಆಗಿದೆ. ನನ್ನ ಸಹೋದರ ನಿತಿನ್ ಗುತ್ತೇದಾರ ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತೇನೆ ಎಂದು ಅಫಜಲಪುರ ಬಿಜೆಪಿ‌ ಅಭ್ಯರ್ಥಿ ಮಾಲೀಕರಯ್ಯ ಗುತ್ತೇದಾರ ತಿಳಿಸಿದರು.
ಬಿಜೆಪಿ ಕಚೇರಿಯ ಲ್ಲಿ ಮಾಧ್ಯಮ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮ ಗಳಿಗೆ ಈ ವಿಷಯ ತಿಳಿಸಿದರು. ಸಹೋದರ ಪಕ್ಷೇತರರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಮನವೊಲಿಸಿ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡುತ್ತೇನೆ. ನನ್ನ ಉತ್ತರಾಧಿಕಾರಿ ನಿತಿನ್ ಆಗಿದ್ದಾರೆ. ನನ್ನ ಮಕ್ಕಳನ್ನು ರಾಜಕೀಯಕ್ಕೆ ತಂದಿಲ್ಲ. ಹೀಗಾಗಿ ಯಾವುದೇ ಸಂಶಯ ಬೇಡ ಎಂದರು.
ಕುಟುಂಬಕ್ಕೊಂದು ಟಿಕೆಟ್ ಸೂತ್ರದಡಿ ಈಗಾಗಲೇ ಬಿ.ಜಿ.‌ಪಾಟೀಲ್ ಎಂಎಲ್ಸಿಗಳಾಗಿದ್ದಾರೆ. ಅವರ ಮಗ ಚಂದು ಪಾಟೀಲ್ ಅವರಿಗೆ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಎಂಎಲ್ಸಿ ಸ್ಥಾನಕ್ಕೆ ಕಂಟಕ ಎದುರಾದರೆ ರಾಜೀನಾಮೆ ನೀಡುವ ಬಗ್ಗೆಯೂ ಬಿ.ಜಿ.‌ಪಾಟೀಲ್ ಹೇಳಿಕೊಂಡಿದ್ದಾರೆ. ಮುಂದೆ ವರಿಷ್ಠರ ಗಮನಕ್ಕೆ ಬಿಟ್ಟ ವಿಚಾರವಾಗಿದೆ ಎಂದರು.

Exit mobile version