Home ತಾಜಾ ಸುದ್ದಿ ಧಾರವಾಡ: ಕಾಂಗ್ರೆಸ್‌ ಮುಖಂಡ ರಾಜೀನಾಮೆ

ಧಾರವಾಡ: ಕಾಂಗ್ರೆಸ್‌ ಮುಖಂಡ ರಾಜೀನಾಮೆ

0

ಧಾರವಾಡ: ಕಾಂಗ್ರೆಸ್ ಹಿರಿಯ ಮುಖಂಡ ಪಿ.ಎಚ್. ನೀರಲಕೇರಿ ಕಾಂಗ್ರೆಸ್‌ ಪಕ್ಷಕ್ಕೆ ಗುಡ್‌ಬೈ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರು, ಇಂದು ರಾಜೀನಾಮೆ ನೀಡಿದ್ದಾರೆ.
ಟಿಕೆಟ್ ಹಂಚಿಕೆಯಲ್ಲಿ ಆದ ಅನ್ಯಾಯ, ಸ್ಥಳೀಯ ಕೆಲ ನಾಯಕರು, ರಾಜ್ಯ ಮಟ್ಟದ ನಾಯಕರ ವರ್ತನೆಗಳಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ನೀರಲಕೇರಿ ತಿಳಿಸಿದ್ದಾರೆ.

Exit mobile version