ದನಗಳ ಹಾವಳಿ ತಪ್ಪಿಸಲು ಆಗ್ರಹಿಸಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ

0
20

ಧಾರವಾಡ : ಹೊಲಗಳಿಗೆ ದನಗಳು ನುಗ್ಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆ ಹಾನಿಯಾಗುತ್ತಿದ್ದು, ದನಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಧಾರವಾಡ ತಾಲೂಕಿನ ಸತ್ತೂರು ಹಾಗೂ ತಡಸಿಕೋಪ್ಪ ಗ್ರಾಮದ ರೈತರು ಧಾರವಾಡ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಏಕಾ ಏಕಿ ಹಿಂಡು ಹಿಂಡಾಗಿ ದನಗಳು ನುಗ್ಗಿ ರೈತರು ಬೆಳೆದ ಬೆಳೆ ಹಾನಿಯಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟವರಿಗೆ ಹಲವಾರು ಭಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಧಿಕ್ಕಾರ ಕೂಗುತ್ತಾ ಪೋಲಿಸರ ಜೊತೆಗೆ ವಾಗ್ವಾದಕ್ಕಿಳಿದ ದೃಶ್ಯಗಳು ಕಂಡು ಬಂತು.
ಈ ಕುರಿತು ಧಾರವಾಡ ತಹಸೀಲ್ದಾರ್ ಗಂಭೀರವಾಗಿ ಪರಿಗಣಿಸಬೇಕು. ರೈತರ ಹೊಲಗಳಿಗೆ ದನಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

Previous articleಸಂಯುಕ್ತ ಕರ್ನಾಟಕದ ಗುರುರಾಜ್ ಕುಲಕರ್ಣಿ, ರಾಧಾಕೃಷ್ಣ ಭಟ್, ಪಿ.ಕೆ.ಬಡಿಗೇರ ಸೇರಿದಂತೆ ಹಲವರಿಗೆ ಕೆಯುಡಬ್ಲ್ಯುಜೆ ವಾರ್ಷಿಕ ಪ್ರಶಸ್ತಿ
Next articleಭೂ ಸುರಕ್ಷಾ ಯೋಜನೆ ಜಾರಿ: ಜನರ ಕೈಗೆ ರೆಕಾರ್ಡ್ ರೂಮ್