ತಾಯಿ ಆಸೆಯಂತೆ ಕೆಂಬಾಲು ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿದ ನಟ ಪ್ರಭುದೇವ

0
33

ಮೈಸೂರು: ​​ ನಟ​ ಪ್ರಭುದೇವ ನಂಜನಗೂಡಿನ ಕೆಂಬಾಲು ಗ್ರಾಮದಲ್ಲಿರುವ ಮಹದೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ನಟ​ ಪ್ರಭುದೇವ ತಾಯಿ ಮಹದೇವಮ್ಮ ಮೂಲತ: ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದವರು ನಂಜನಗೂಡು ತಾಲೂಕಿನ ಕೆಂಬಾಳು ಗ್ರಾಮದಲ್ಲಿ ಪ್ರಭುದೇವ ಅವರ ತಾಯಿ ಮಹದೇವಮ್ಮ ಅವರು ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಪಕ್ಕದಲ್ಲೇ ಇದ್ದ ಮಲೆ ಮಹದೇಶ್ವರ ದೇವಸ್ಥಾನ ಶಿಥಿಲಾವಸ್ಥೆಯಲ್ಲಿತ್ತು. ಚೋಳರ ಕಾಲದ ದೇವಸ್ಥಾನ ಅತ್ಯಂತ ಪ್ರಖ್ಯಾತಿ ಪಡೆದಿತ್ತು. ಹಾಗಾಗಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಅದೇ ದೇವಾಲದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ಸದ್ಯ ತನ್ನ ತಾಯಿ ಆಸೆಯಂತೆ, ಗ್ರಾಮಸ್ಥರ ಬಯಕೆಯಂತೆ ನಟ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿದ್ದಾರೆ.

Previous articleಔಷಧಿ ಇದ್ರು, ಔಷಧಿ ಕೊಡ್ತಿಲ್ಲ: ಡಿಎಚ್‌ಒ, ಜಿಲ್ಲಾ ಸರ್ಜನ್‌ಗೆ ಡಾ.ನಾಗಲಕ್ಷ್ಮೀ ಚೌಧರಿ ತರಾಟೆ
Next articleಜಾತಿ ಜನಗಣತಿ ವಿಧಾನಸಭೆ ವಿಶೇಷ ಅಧಿವೇಶನ ಕರೆಯಿರಿ