ಜನ್ಮಾಂತರಕ್ಕೂ ಬೇಕು ಸತ್‌ಸಂಸ್ಕಾರದ ಬುತ್ತಿ…

0
21
PRATHAPPHOTOS.COM

ಪಾಲಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದ ಕಳ್ಳತನ ಮಾಡಬಾರದು ಸುಳ್ಳು ಹೇಳಬಾರದು. ಪರಪೋಕಾರ ಮಾಡಬೇಕು ದಾನಧರ್ಮ ಮಾಡಬೇಕು. ಹಿರಿಯರಿಗೆ ದೇವರಿಗೆ ಅತಿಥಿಗಳಿಗೆ ಬಾಗಿ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು.
ಇಂತಹ ಅಭ್ಯಾಸಗಳನ್ನು ಮಕ್ಕಳಿಗೆ ಮಾಡಿಸುತ್ತ ಬರಬೇಕು. ಹಾಗೆಯೇ ವಯಸ್ಸಿಗೆ ತಕ್ಕಂತೆ ಸಂಸ್ಕಾರ ಕಲಿಸುತ್ತ ಹೋದರೆ ಕೊನೆಯ ಕಾಲದಲ್ಲಿ ಮಕ್ಕಳಿಗೆ ದೇವತೆಗಳ ಸ್ಮರಣೆ ಬರಲು ಸಾಧ್ಯ ಇದೆ. ಸಾತ್ವಿಕರ ಸಜ್ಜನರ ಸಂಘದ ಪರಿಸರದ ಸ್ಮರಣೆ ಬರಲು ಸಾಧ್ಯವಿದೆ.
ಇಂದಿನ ಜನ್ಮದಲ್ಲಿ ಮಾತ್ರವಲ್ಲ ಹಿಂದಿನ ಜನ್ಮದಲ್ಲಿಯೂ ಕೂಡ ನಮ್ಮ ತಂದೆ ತಾಯಿ ಹಿರಿಯರು ನಮಗೆ ಒಳ್ಳೆಯ ಸಂಸ್ಕಾರ ಕೊಟ್ಟಿರೋದಕ್ಕೆ ನಾವು ಸಜ್ಜನರ ಸ್ಮರಣೆಯಾಗಿದ್ದರಿಂದ ಈಗ ಈಗಲೂ ಕೂಡ ಸಜ್ಜನರ ಮಧ್ಯದಲ್ಲಿ ಹುಟ್ಟಿರುತ್ತೇವೆ.
ಇದು ಹೀಗೆ ಮುಂದುವರೆದರೆ ಒಳ್ಳೆಯ ಜನುಮ ಬರುತ್ತದೆ ಇದನ್ನು ಹೀಗೆ ಮುಂದುವರಿಸಬೇಕೆಂದರೆ ನಮ್ಮ ಮಕ್ಕಳಿಗೂ ಇದೆ ಮಾರ್ಗವನ್ನು ತೋರಿಸಿ ಅವರನ್ನೂ ಧಾರ್ಮಿಕನ್ನಾಗಿ ಮಾಡಿ ಅವರು ಸದ್ವಿಚಾರವನ್ನು ಪಡೆದುಕೊಳ್ಳುವಂತೆ ಮಾಡಿದರೆ ನಮ್ಮ ಮಕ್ಕಳ ಈ ಜನ್ಮದ ಜವಾಬ್ದಾರಿಯನ್ನು ಮಾತ್ರ ಮಾಡಿದಂತಲ್ಲ ಮುಂದಿನ ಜವಾಬ್ದಾರಿಯನ್ನು ನಾವು ಮಾಡಿದಂತೆ ಅಲ್ಲವೇ. ಅದು ತಾನೇ ನಿಜವಾದ ಪ್ರೀತಿ. ಇನ್ನೂ ನಿಜವಾದ ತಂದೆ ತಾಯಿ ನೀವು ಆಗಬೇಕಾದರೆ ಈ ಜನ್ಮಕ್ಕಲ್ಲ ಮುಂದಿನ ಜನ್ಮಕ್ಕೂ ಮಕ್ಕಳಿಗೆ ಬುದ್ಧಿಯನ್ನು ಕಟ್ಟಿ ಕೊಟ್ಟರೆ ಆಗ ನೀವು ನಿಜವಾದ ತಂದೆ ತಾಯಿ ಎಂದು ಶಾಸ್ತ್ರಗಳು ಹೇಳುತ್ತವೆ. ಮುಂದಿನ ಜನುಮಕ್ಕೆ ಬೇಕಾದ ಬುತ್ತಿ ಕಟ್ಟಿ ಕೊಡಬೇಕು. ಅದು ಯಾವ ಬುತ್ತಿ ಎಂದರೆ..
ಆನಂದತೀರ್ಥಪೋದಿಷ್ಟ: ನಿಧಿರಾಣಾರಾಯಣತ್ವಯ:
ನಾರಾಯಣವೆಂಬ ನಿಧಿಯಲ್ಲಿ ಎಲ್ಲ ಪುಣ್ಯಕರ್ಮಗಳನ್ನು ಸಮರ್ಪಣೆ ಮಾಡಿ ಇಟ್ಟರೆ ನಿಮ್ಮ ಮಕ್ಕಳಿಂದಲೂ ಧರ್ಮ ಮಾಡಿಸಿ ಅದರ ಪುಣ್ಯವನ್ನು ನಿಧಿಯಾಗಿಸಿಟ್ಟ ಬುತ್ತಿ ಇದೆಯಲ್ಲ ಅದು ಮುಂದಿನ ಜನ್ಮಕಲ್ಲ ಮುಂದಿನ ಅನಂತ ಜನ್ಮಗಳಲ್ಲಿ ಮೋಕ್ಷವಾಗುವವರೆಗೂ ಎಷ್ಟೆಲ್ಲ ಜನ್ಮಗಳು ಬರುತ್ತವೆಯೋ ಆ ಜನ್ಮ ನಿಗಳಿಗೆ ಎಲ್ಲಾ ಅದು ಬುತ್ತಿಯಾಗಿ ಮನುಷ್ಯನಿಗೆ ದಾರಿಯಾಗಿ, ದಾರಿಯಲ್ಲಿ ಸಹಾಯಕವಾಗಿರುತ್ತದೆ.

Previous articleನಿಸರ್ಗ ಪ್ರಕೋಪಕ್ಕೆ ಹೊಣೆಗಾರರು ನಾವೇ
Next articleತಾಯಿ ಹಳ್ಳದಲ್ಲಿ ವೃದ್ಧೆಯ ಶವ ಪತ್ತೆ