Home ನಮ್ಮ ಜಿಲ್ಲೆ ಚಂದ್ರಯಾನ ಯಶಸ್ವಿಗೆ ಸೀರೆಯಲ್ಲಿ ನೇಯ್ಗೆ

ಚಂದ್ರಯಾನ ಯಶಸ್ವಿಗೆ ಸೀರೆಯಲ್ಲಿ ನೇಯ್ಗೆ

0

ಇಳಕಲ್: ಇಸ್ರೋ ಕೈಗೊಂಡ ಚಂದ್ರಯಾನ ಯಶಸ್ವಿಯಾಗಲಿ ಎಂದು ಇಳಕಲ್‌ನ ನೇಕಾರ ಮೇಘರಾಜ ಗುದ್ದಾಟಿ ಸೀರೆಯಲ್ಲಿ ಸುಂದರವಾಗಿ ನೇಯ್ದಿದ್ದಾರೆ.
ಇಸ್ರೋ ಉಡಾವಣೆ ಮಾಡಿದ ರಾಕೆಟ್ ಆಗಸ್ಟ್ ೨೩ರಂದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲಿ ಇಡೀ ವಿಶ್ವವೇ ಬೆರಗಾಗುವಂತೆ ನಡೆದ ಈ ಉಡಾವಣೆಯಿಂದ ದೇಶಕ್ಕೆ ಮತ್ತು ಇಸ್ರೋಗೆ ಜಯ ಸಿಗಲಿ ಎಂಬ ದೇಶದ ಧ್ವಜವನ್ನು ಮತ್ತು ರಾಕೆಟ್‌ನ್ನು ಸೀರೆಯ ಸೆರಗಿನಲ್ಲಿ ಆಕರ್ಷಕವಾಗಿ ಬಿಡಿಸಿದ್ದಾರೆ. ಈಗಾಗಲೇ ಇವರು ಇಂತಹ ಹಲವಾರು ನೇಯ್ಗೆಗಳನ್ನು ಮಾಡಿ ಇಡೀ ರಾಜ್ಯಾದ್ಯಂತ ಹೆಸರು ಮಾಡಿರುವದನ್ನು ಇಲ್ಲಿ ಸ್ಮರಿಸಬಹುದು.

Exit mobile version