ಗ್ಯಾಂಗ್ ರೇಪ್ ಪ್ರಕರಣ: ಮತ್ತೆ ನಾಲ್ವರ ಬಂಧನ

0
11

ಹಾವೇರಿ: ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಸಮೀಪ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈವರೆಗೂ ಒಟ್ಟು ೧೮ ಆರೋಪಿಗಳನ್ನು ಬಂಧಿಸಲಾಗಿದೆ. ಅಕ್ಕಿಆಲೂರಿನ ಮೀನು ವ್ಯಾಪಾರಿಗಳಾದ ಇಸ್ಮಾಯಿಲ್ ಓಣಿಕೇರಿ (೨೮), ಮೊಹಮ್ಮದ್ ಸಾದಿಕ್ ಕುಸನೂರು (೨೫), ಮೊಬೈಲ್ ಮೆಕ್ಯಾನಿಕ್ ಆಸೀಫ್‌ಖಾನ್ (೨೬) ಬಂಧಿತ ಆರೋಪಿಗಳು.
ಅಪಘಾತದಲ್ಲಿ ಕಾಲಿನ ಮೂಳೆ ಮುರಿದುಕೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಕ್ಕಿಆಲೂರಿನ ಆರೋಪಿ ಮೊಹಮ್ಮದ್ ಸೈಫ್ ಸಾವಿಕೇರಿ(೧೯) ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಈತನನ್ನೂ ಗುರುವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯಾದ ಆಟೊ ಚಾಲಕ ಅಬ್ದುಲ್‌ಖಾದರ್ ಹಂಚಿನಮನಿ ಜಾಮೀನು ಕೋರಿ ಹಾವೇರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ತಿಳಿದು ಬಂದಿದೆ.

Previous articleಸಿಎಂಗೆ ೨೧೦೦ ರೂ. ಮೊತ್ತದ ಚೆಕ್ ಕಳುಹಿಸಿದ ರೈತರು
Next articleಹಂಪಿ ಎಲ್ಲಮ್ಮ ದೇವಿ ಕಳಶ ಕಳವು