ಗದ್ದುಗೆಯ ತಿಜೋರಿ ಕಳ್ಳತನ ಮಾಡಿದ ಖದೀಮರು

0
39

ಇಳಕಲ್ : ಇಲ್ಲಿನ ವಿಜಯ ಮಹಾಂತೇಶ ಪೀಠದ ಗದ್ದುಗೆಯ ತಿಜೋರಿಯನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋದ ಘಟನೆ ಶುಕ್ರವಾರದಂದು ರಾತ್ರಿ ನಡೆದಿದೆ.
೧೬ ನೇ ಪೀಠಾಧಿಪತಿ ಲಿಂಗೈಕ್ಯ ವಿಜಯ ಮಹಾಂತ ಶಿವಯೋಗಿಗಳ ಗದ್ದುಗೆ ಇರುವ ಸ್ಥಳದ ಹತ್ತಿರ ಇದ್ದ ಈ ತಿಜೋರಿಯನ್ನು ಬುಡ ಸಮೇತ ಕಿರಾತಕರು ಕಿತ್ತುಕೊಂಡು ಹೋಗಿದ್ದಾರೆ ಅದರ ಪಕ್ಕದಲ್ಲಿಯೇ ಇದ್ದ ಇನ್ನೊಂದು ದೊಡ್ಡ ತಿಜೋರಿಯನ್ನು ಎಗರಿಸಲು ಕಳ್ಳರು ಪ್ರಯತ್ನ ಮಾಡಿದ್ದು ಅದರಲ್ಲಿ ವಿಫಲರಾಗಿದ್ದಾರೆ. ಆದರೆ ಗದ್ದುಗೆಯಲ್ಲಿ ಮಲಗಲು ಹೋದ ಭಕ್ತರ ಬೈಕನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.


ಬೆಳಿಗ್ಗೆ ಶ್ರಾವಣ ಮಾಸದ ಈ ಸಮಯದಲ್ಲಿ ಭಕ್ತರು ಗದ್ದುಗೆಗೆ ಹೋದಾಗ ಇದನ್ನು ನೋಡಿದ ನಂತರ ಇದು ಊರಲ್ಲಿ ಸುದ್ದಿಯಾಗಿ ಹಲವಾರು ಭಕ್ತರು ಗದ್ದುಗೆಯತ್ತ ಸಾಗಿ ಅದನ್ನು ನೋಡಿ ದೇವರ, ಸ್ವಾಮಿಗಳ ಹಣವೂ ಕಳ್ಳರಿಗೆ ಬೇಕಾ ಎಂದು ಮಾತನಾಡಿಕೊಳ್ಳುತ್ತಿದ್ದರು.
ಶಹರ್ ಪೋಲಿಸ್ ಠಾಣೆಯ ಪಿಎಸ್ ಐ ಎಸ್ ಆರ್ ನಾಯಕ ಮತ್ತು ಪೋಲಿಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ .ಗದ್ದುಗೆಯಲ್ಲಿ ಯಾವುದೇ ಸಿಸಿ ಕ್ಯಾಮರಾ ಇಲ್ಲವಾದರೂ ಗದ್ದುಗೆಗೆ ಹೋಗುವ ಮಾರ್ಗಮಧ್ಯದಲ್ಲಿ ಇರುವ ಸಿಸಿ ಕ್ಯಾಮರಾಗಳ ಮೂಲಕ ಕಳ್ಳರ ಪತ್ತೆ ಮಾಡಬೇಕಾದ ಅನಿವಾರ್ಯತೆ ಇದೆ.

Previous articleಫಸಲ್ ಭೀಮಾ ಯೋಜನೆ ಅಕ್ರಮ ಪ್ರಕರಣ: ಇಬ್ಬರ ಬಂಧನ
Next articleಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಶಿಖರ್ ಧವನ್