ಕೊಠಡಿ ನಿರ್ಮಾಣಕ್ಕೆ ಅನುದಾನ: ಯು.ಬಿ. ವೆಂಕಟೇಶ್‌ಗೆ ಸನ್ಮಾನ

0
13

ಉಡುಪಿ: ಇಲ್ಲಿನ ಗುಂಡಿಬೈಲಿನಲ್ಲಿರುವ ಯುವ ಬ್ರಾಹ್ಮಣ ಪರಿಷತ್ (ವೈಬಿಪಿ) ಆಶ್ರಯದ ಬ್ರಾಹ್ಮಿ ಸಭಾಭವನದಲ್ಲಿ ಕೊಠಡಿ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ ೫ ಲಕ್ಷ ರೂ. ಅನುದಾನ ನೀಡಿದ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಅವರನ್ನು ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೆ.ಎನ್.ಚಂದ್ರಕಾಂತ ಗುರುವಾರ ಸನ್ಮಾನಿಸಿದರು.
ಯು.ಬಿ.ವೆಂಕಟೇಶ್ ಅವರು ಗುರುವಾರ ಬೆಳಗ್ಗೆ ಪರಿಷತ್‌ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಹರ್ಷ ವ್ಯಕ್ತಪಡಿಸಿದರು. ಪರಿಷತ್ತಿನ ಕರ‍್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲೂ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರ ಪುತ್ರ ಯು.ಬಿ.ಗಣೇಶ್, ಪರಿಷತ್ ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ, ಮಾಜಿ ಅಧ್ಯಕ್ಷ ಎಂ.ಎಸ್.ವಿಷ್ಣು ಮತ್ತು ವಿಷ್ಣುಪ್ರಸಾದ್ ಪಾಡಿಗಾರು, ಹಿರಿಯ ಸದಸ್ಯ ರಘುಪತಿ ರಾವ್ ಇದ್ದರು.

Previous articleಈಶ್ವರಪ್ಪ ಕೆರಳಿದ ಸಿಂಹ
Next articleವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ನಿರ್ಮಾಣ