Home ನಮ್ಮ ಜಿಲ್ಲೆ ಕೊಪ್ಪಳ ಕುಷ್ಟಗಿಯಲ್ಲಿ ಹಾಡಹಗಲೇ ಮನೆ ಕಳ್ಳತನ

ಕುಷ್ಟಗಿಯಲ್ಲಿ ಹಾಡಹಗಲೇ ಮನೆ ಕಳ್ಳತನ

0

ಕುಷ್ಟಗಿ: ಪಟ್ಟಣದ ಹೊರವಲಯದ ಶಾಖಾಪುರ ರಸ್ತೆಯಲ್ಲಿನ ಮನೆಯೊಂದರಲ್ಲಿ ಇಂದು ಹಾಡಹಗಲೇ ಕಳ್ಳತನ ನಡೆದಿದ್ದು, ಮನೆಯಲ್ಲಿ ಇಟ್ಟಿದ್ದ ನಗದು, ಬಂಗಾರದ ಆಭರಣ ಕಳುವಾಗಿವೆ.
ಹನುಮಂತಪ್ಪ ಕುಂಟೆಪ್ಪ ಭಜಂತ್ರಿ ಇವರಿಗೆ ಸೇರಿದ ಮನೆಯ ಲಾಕರ್ನಲ್ಲಿದ್ದ 7 ಲಕ್ಷ ರೂಪಾಯಿಗಳು ಸೇರಿದಂತೆ 10 ತೊಲೆ ಬಂಗಾರ ಕಳ್ಳತನವಾಗಿದೆ. ಮನೆ ಮಾಲಿಕರು ಸೇರಿದಂತೆ ಸಹೋದರರು ಮನೆಯಿಂದ ಹೊರಗಡೆ ಕೆಲಸಕ್ಕೆ ಹೋಗುವುದನ್ನು ಗಮನಿಸಿದ ಕಳ್ಳರು ಕೇವಲ ಒಂದು ಗಂಟೆಯೊಳಗಾಗಿ ಕಳ್ಳತನ ಮಾಡಿರುವುದು ಸ್ಪಷ್ಟವಾಗಿದೆ.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪಿಎಸ್‌ಐ ಮೌನೇಶ್ ರಾಥೋಡ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version