Home ನಮ್ಮ ಜಿಲ್ಲೆ ಕೊಪ್ಪಳ ಕುಷ್ಟಗಿಯಲ್ಲಿ ಬಿರುಗಾಳಿ ಸಮೇತ ಮಳೆ

ಕುಷ್ಟಗಿಯಲ್ಲಿ ಬಿರುಗಾಳಿ ಸಮೇತ ಮಳೆ

0

ಕುಷ್ಟಗಿ: ಪಟ್ಟಣದಲ್ಲಿ ಬಿರುಗಾಳಿ ಸಮೇತ ಮಳೆಯಾಗಿದ್ದು, ಮಳೆಯಿಂದಾಗಿ ವಿದ್ಯುತ್ ತಂತಿ ಹರಿದು ಬಿದ್ದಿದ್ದು, ಚರಂಡಿ ನೀರು ರಸ್ತೆ ಮೇಲೆ ಹರಿದು ಬಂದಿದೆ. ಇದರಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಶನಿವಾರ ಮಧ್ಯಾಹ್ನ 3ಗಂಟೆಗೆ ಪ್ರಾರಂಭವಾದ ಮಳೆ ಸುಮಾರು 1ಗಂಟೆವರೆಗೂ ಸುರಿದು ಭಾರಿ ಅವಾಂತರವನ್ನೇ ಸೃಷ್ಟಿಸಿದೆ. ಬಸವ ಭವನದಲ್ಲಿರುವ ಒಂದು ಮರ ನೆಲಕ್ಕೆ ಉರುಳಿ ಬಿದ್ದರೆ. ತೋಟಗಾರಿಕೆ ಇಲಾಖೆಯಲ್ಲಿ ವಿದ್ಯುತ್ ಕಂಬದಿಂದ ಹಾದು ಹೋಗಿರುವ ಮುಖ್ಯ ವಿದ್ಯುತ್ ಲೈನಿನ ವೈರ್ ಕಟ್ಟಾಗಿ ಬಿದ್ದಿದೆ.
ಬಸವೇಶ್ವರ ವೃತ್ತದಿಂದ ಬಸ್ ನಿಲ್ದಾಣದವರೆಗಿನ ರಸ್ತೆಯ ಪಕ್ಕದಲ್ಲಿ ಇರುವಂತಹ ಚರಂಡಿ ತುಂಬಿಕೊಂಡು ನೀರು ರಸ್ತೆ ಮೇಲೆ ನಿಂತುಕೊಂಡಿದ್ದು. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲ ಅಂಗಡಿಗಳಿಗೆ ಮಳೆ ನೀರು ನುಗ್ಗಿ ಅಂಗಡಿಯಲ್ಲಿದ್ದ ಸಾಮಾನುಗಳು ಮಳೆಗೆ ಹಾನಿಯಾಗಿವೆ.

Exit mobile version