ಕುಟಂಬ ಸಮೇತ ಬಂದು ನಾಮಪತ್ರ ಸಲ್ಲಿಸಿದ ಸುಧಾಕರ್

0
54
ಸುಧಾಕರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, ಗುರುವಾರ ಗುರುವನ್ನು ನಂಬುವ ನಾನು ತಿರುಪತಿ ತಿಮ್ಮಪ್ಪನ ಪರಮ ಭಕ್ತ. ಹಾಗಾಗಿ ಇಂದು ದೇವರ ದರ್ಶನ ಪಡೆದು ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರಿಲ್ 17ರಂದು ಮತ್ತೆ ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.
ಸುಧಾಕರ್‌ ಅವರೊಂದಿಗೆ ಪತ್ನಿ ಪ್ರೀತಿ, ತಂದೆ ಕೇಶವರೆಡ್ಡಿ, ಸಹೋದರಿ ಅಶ್ವಿನಿ ಹಾಗೂ ಮಾವ ಆನಂದ್ ಜತೆಗಿದ್ದರು.

Previous articleಮೊದಲ ದಿನವೇ ಸಾಹುಕಾರ ನಾಮಪತ್ರ ಸಲ್ಲಿಕೆ
Next articleಅಮೃತ ದೇಸಾಯಿ ನಾಮಪತ್ರ ಸಲ್ಲಿಕೆ