ಕರುಣೆ ಇಲ್ಲದ ಪೊಲೀಸ್..!

0
11

ಬೆಳಗಾವಿ: ನಟ್ಟ ನಡು ರಸ್ತೆಯಲ್ಲಿ ಉದ್ಯಮಬಾಗ ಪೊಲೀಸರು ಓರ್ವನನನ್ನು ದನಕ್ಕೆ ಬಡಿದಂತೆ ಬಡಿದು ತಮ್ಮ ಪೌರುಷ ತೋರಿಸಿದ್ದಾರೆ. ರಸ್ತೆ ಮಧ್ಯದಲ್ಲಿ ನೆಲಕ್ಕೆ ಬೀಳಿಸಿ ಒಬ್ಬ ಲಾಠಿಯಿಂದ ದನಕ್ಕೆ ಬಡಿದಂತೆ ಬಡೆಯುತ್ತಿದ್ದರೆ ಮತ್ತೊಬ್ಬ ಕಾಲಿನಿಂದ ಒದೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಮಾನವೀಯ ಹೊಡೆತ ತಾಳದೇ ಚೀರಾಟ ನಡೆಸಿದರೂ ಕೂಡ ಕೇಳದ ಪೊಲೀಸರು ಆ ವ್ಯಕ್ತಿಯನ್ನು ಸುತ್ತುವರೆದು ಬಡೆಯುತ್ತಿದ್ದರು.

ಮೂಲಗಳ ಪ್ರಕಾರ ಉದ್ಯಮಬಾಗ ಪ್ರದೇಶದಲ್ಲಿರುವ ಹೊಟೇಲ್‌ಗೆ ಈತ ಬಂದಿದ್ದನು. ಇಲ್ಲಿ ಪೊಲೀಸರಿಗೆ ಹೊಟೇಲ್ ಮೇಲಿನ ಸಿಟ್ಟಿತ್ತೋ ಏನೋ. ಗ್ರಾಹಕನನ್ನು ಮನಸೋಇಚ್ಚೆ ಥಳಿಸಿ ತಮ್ಮ ಪೌರುಷ ತೋರಿಸಿದರು.

ಈ ರೀತಿ ಅಮಾನವೀಯ ಹೊಡೆತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಅದಕ್ಕೊಂದು ಕಥೆ ಕಟ್ಟುವ ಕೆಲಸ ನಡೆಸಿದರು ಎಂದು ಹೇಳಲಾಗಿದೆ.

Previous article2019ರಲ್ಲಿಯೇ ʻಭವಿಷ್ಯʼ ನುಡಿದಿದ್ದ ಮೋದಿ!
Next articleಭೀಕರ ರಸ್ತೆ ಅಪಘಾತ: ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆ