ಕನ್ನಡಿಗರ ಮೇಲೆ ಹಲ್ಲೆ, ಬಾವುಟ ತುಳಿದು ಅವಮಾನ..!

0
15


ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ನಿರಂತರವಾಗಿ ಕನ್ನಡಿಗರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಅಷ್ಟೇ ಅಲ್ಲ ಕನ್ನಡ ನಾಡಿನಲ್ಲಿ ಕನ್ನಡ ಬಾವುಟ ಹಾರಿಸುವುದು ಅಪರಾಧ ವಾಗಿ ಬಿಟ್ಟಿದೆ.
ಮೆರವಣಿಗೆಯಲ್ಲಿ ಕನ್ನಡ ಬಾವುಟ ಹಾರಿಸಿದವರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ.
ಸಧ್ಯ ಗಡಿನಾಡಲ್ಲಿ ಮರಾಠಿಗರ ಅತಿಯಾದ ಓಲೈಕೆಯೇ ಇದಕ್ಕೆ ಕಾರಣವಾಗಿದೆ.
ಕಳೆದ ದಿನ ಶ್ರೀರಾಮ ನವಮಿ ನಿಮಿತ್ತ ನಡೆದ ಮೆರವಣಿಗೆ ಸಂದರ್ಭದಲ್ಲಿ ಕನ್ನಡಿಗನೊಬ್ಬ ಕನ್ನಡ ಬಾವುಟ ಹಿಡಿದು ಕುಣಿಯುತ್ತಿದ್ದನು. ಇದನ್ನು ಗಮನಿಸಿದ ಅಲ್ಲಿದ್ದ ಕೆಲ ಪುಂಡರು ಕನ್ನಡಿಗನ‌ ಕೈಯ್ಯಲ್ಲಿದ್ದ ಬಾವುಟ ಕಿತ್ತೆಸೆದು ತುಳಿದು ಅವಮಾನಿಸಿದ್ದಲ್ಲದೇ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು.‌ಈ ಎಲ್ಲ‌ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಗೊಂಡವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದರು. ಪ್ರಕರಣ ಕೂಡ ದಾಖಲಾಗಿದೆ.
ಇಷ್ಟೆಲ್ಲ ನಡೆದರೂ ಕೂಡ ತಾವೊಬ್ಬ ಜನಪ್ರತಿನಿಧಿ ಘಟನೆಯನ್ನು ಖಂಡಿಸಿಲ್ಲ ಎನ್ನುವುದು ದೊಡ್ಡ ದುರಂತ.

Previous articleನೀತಿ ಸಂಹಿತೆ ಉಲ್ಲಂಘನೆ: ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ಎಫ್ ಐಆರ್
Next articleಮಂಗಳೂರ: ಲಾಡ್ಜ್‌ನಲ್ಲಿ ಅವಳಿ ಹೆಣ್ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ