ಆಲಿಕಲ್ಲು ಮಳೆಗೆ ಹಿಮಪಾತದಂತಾದ ಗ್ರಾಮ

0
19
ಕೊತಬಾಳ

ಗದಗ: ರೋಣ ತಾಲೂಕಿನ ಕೊತಬಾಳ, ಹಿರೇಹಾಳ ಗ್ರಾಮದಲ್ಲಿ ಸುರಿದ ಗುಡುಗು ಸಹಿತ ಆಲಿಕಲ್ಲು ಮಳೆಗೆ ಗ್ರಾಮ ಹಿಮಪಾತದಂತಾಗಿದೆ.
ರೋಣ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಧ್ಯಾಹ್ನದಿಂದ ಸಂಜೆಯವರೆಗೂ ಸುರಿದ ಮಳೆ, ಬಿಸಿಲಿನಿಂದ ಬಸವಳಿದ ಜನರಿಗೆ ತಂಪಿನ ಇಂಪು ನೀಡಿದೆ. ಕೊತಬಾಳ ಗ್ರಾಮದಲ್ಲಿ ಆಲಿಕಲ್ಲುಗಳ ಮಳೆಯಾಗಿದ್ದರಿಂದ ಆಲಿಕಲ್ಲಿನ ಹಿಮದ ರಾಶಿಯೆ ಬಿದ್ದಿತ್ತು. ಅಬ್ಬರದ ಗಾಳಿಯೂ ಬೀಸಿದ ಪರಿಣಾಮ ಮರಗಳು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಮಳೆಯಿಂದಾಗಿ ಕೊತಬಾಳ ಗ್ರಾಮದಲ್ಲಿ ತೋಟಗಾರಿಕೆ ಬೆಳೆಗಳಾದ ಪಪ್ಪಾಯ, ದಾಳಿಂಬೆ, ಟೊಮೆಟೊ ಬೆಳೆ ನೆಲಕಚ್ಚಿವೆ. ರೈತ ಕಲ್ಲಪ್ಪ ನೆಲ್ಲೂರ ಅವರ ಜಮೀನಿನಲ್ಲಿ ಬೀಜ ತಯಾರಿಕೆಗೆ ಬೆಳೆಯಲಾಗಿದ್ದ ಉಳಾಗಡ್ಡಿ ಬೆಳೆ ಸಂಪೂರ್ಣ ಹಾಳಾಗಿದೆ. ಪ್ರತಿ ಮನೆಯ ಮೇಲೆ ಹಿಮದಪಾತದ ರಾಶಿ ಬಿದ್ದಿದ್ದು, ಇದನ್ನು ನೋಡಿದ ಜನತೆ ಗಾಬರಿಗೊಂಡಿದ್ದು, ಹಿಂದೆ ಎಂದೂ ಈ ತರಹದ ಆಲಿಕಲ್ಲು ಮಳೆ ಆಗಿಲ್ಲ ಎಂದು ತಿಳಿಸಿದರು.

Previous article24ಗ್ರಾಂ ಪೆನ್ನಿ ಸಮೇತ ಓರ್ವ ಬಂಧನ
Next articleಮತ ಕೇಳಲು ಬಿಜೆಪಿಗರಿಗೆ ಮುಖವಿಲ್ಲ