ಅರಿಶಿಣ ತುಂಬಿದ ಲಾರಿ ಬೆಂಕಿಗಾಹುತಿ

0
22

ಬಾಗಲಕೋಟೆ: ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ತುಂಬ ಗ್ರಾಮದ ಬಳಿ ಅರಿಶಿಣ ತುಂಬಿಕೊಂಡಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಶುಕ್ರವಾರದಂದು ನಡೆದಿದೆ.
ಆಂಧ್ರಪ್ರದೇಶದ ಕಡಪಾದಿಂದ ಅರಿಶಿಣ ಕೊಂಬುಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ತುಂಬ ಗ್ರಾಮದ ಬಳಿ ಬೆಂಕಿ ಹತ್ತಿದ್ದನ್ನು ಚಾಲಕ ನೋಡಿ ಹೆದರಿಕೊಂಡು ಹೋಗುತ್ತಿದ್ದ ಲಾರಿಯಿಂದ ಹೊರಗೆ ಜಿಗಿದಿದ್ದಾನೆ. ಹೀಗಾಗಿ ಲಾರಿ ಅಲ್ಲಿಯೇ ಪಲ್ಟಿಯಾಗಿ ಬಿದ್ದು ಧಗಧಗನೇ ಉರಿಯಲು ತೊಡಗಿದೆ.
ಸ್ಥಳದಲ್ಲಿ ಇದ್ದ ಜನರು ಅಗ್ನಿಶಾಮಕ ಠಾಣೆಗೆ ಫೋನ್ ಮಾಡಿದರೂ ಯಾವುದೇ ಪ್ರಯೋಜನವಾಗದೇ ಲಾರಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಕೊನೆಗೆ ಲಿಂಗಸಗೂರ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸಲು ಪ್ರಯತ್ನಿಸಿತು. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲು ಸತ್ತಿಗೌಡರ, ಸಿಬ್ಬಂದಿ ರಂಗನಾಥ ಲಮಾಣಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleT20 ವಿಶ್ವಕಪ್​ ಟೂರ್ನಿಯ ಕಾಮೆಂಟರಿ ಬಳಗದಲ್ಲಿ DK
Next articleಹಿಂದುತ್ವ ಪ್ರತಿಪಾದಕರಿಗೆ ಟಿಕೆಟ್ ಇಲ್ಲ