ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗ: ತೀವ್ರಗತಿಗೆ ಶೆಟ್ಟರ್‌ ಸೂಚನೆ

0
26

ಹುಬ್ಬಳ್ಳಿ: ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗದ ಅನುಷ್ಠಾನಕ್ಕೆ ಆದಷ್ಟು ಬೇಗನೆ ತೀವ್ರಗತಿ ಪ್ರಯತ್ನ ಮಾಡಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹುಬ್ಬಳ್ಳಿ ನೈರುತ್ಯ ರೈಲ್ವೆ ಕಚೇರಿಗೆ ಭೇಟಿ ನೀಡಿದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗದ ಬಗ್ಗೆ ರೈಲ್ವೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಹುಬ್ಬಳ್ಳಿ-ಅಂಕೋಲಾ ಹೊಸ ರೈಲ್ವೆ ಮಾರ್ಗದ ಅನುಷ್ಠಾನ ಮತ್ತು ಕಾನೂನು ಹಾಗೂ ಪರಿಸರ ತೊಡಕುಗಳಿಂದ ಅಡತಡೆ ಉಂಟಾಗಿತ್ತು. ಇತ್ತೀಚಿಗೆ ಹೈಕೊರ್ಟ್‌ನಲ್ಲಿ ದಾಖಲಾಗಿದ್ದ ಸಾರ್ವಜನಿಕ ರಿಟ್ ಅರ್ಜಿಗಳು ನಿಕಾಲೆ (ಡಿಸ್ಪೋಸಲ್) ಆದ ಮೇಲೆ ಈಗ ಆ ಯೋಜನೆಗೆ ತೀವ್ರಗತಿಯಿಂದ ಚಾಲನೆ ದೊರೆತಿದೆ. ಅದಕ್ಕಾಗಿ ಇದರ ಬಗ್ಗೆ ಆದಷ್ಟು ಬೇಗನೆ ಸರ್ವೇ ಮತ್ತು ಕಾಮಗಾರಿ ಚಾಲನೆಗೆ ಬೇಕಾದ ವರದಿ ತಯಾರಿಸುವುದು. ಆದಷ್ಟು ಬೇಗನೆ ತೀವ್ರಗತಿ ಪ್ರಯತ್ನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.


ಹುಬ್ಬಳ್ಳಿ ಅಂಕೋಲಾ ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಅತೀ ಶೀರ್ಘದಲ್ಲಿ ಪ್ರಾರಂಭಿಸಲು ಯೋಜಿಸಿದೆ. ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ನಿರ್ದೇಶನದ ಮೇರೆಗೆ ಫೋರ್-ವೇ (4 ವೇ-ಮಾರ್ಗ) ರೈಲ್ವೆ ಮಾರ್ಗದ ಯೋಜನೆಗೆ ಮತ್ತು ಇಂಟಿಗ್ರೇಟೆಡ್ ಟ್ರಾನ್ಫೋರ್ಟ್ (ರೋಡ್, ರೇಲ್ & ಬಂದರು) ಪ್ರಾಜೆಕ್ಟ್ ತಯಾರಿಸಲು ಸರ್ವೇ ಪ್ರಾರಂಭವಾಗಿದೆ. ಸರ್ವೇ ಮುಗಿದ ತಕ್ಷಣ ಸರ್ವೇ ರಿಪೋರ್ಟ್‌ನ್ನು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ಗೆ ಸಲ್ಲಿಸಲಾಗುವುದು. ಬೋರ್ಡ್‌ನವರ ಒಪ್ಪಿಗೆ ದೊರೆತ ನಂತರ ಮುಂದಿನ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬೇಕಾದ ಸಹಕಾರವನ್ನು ಕೊಡಿಸಲು ಭರವಸೆಯನ್ನು ನೀಡಿ. ಕಾನೂನು ಮತ್ತು ಪರಿಸರ ಸಂಬಂಧಿಸಿದ ವಿಷಯಗಳ ಕುರಿತು ಹುಬ್ಬಳ್ಳಿ ನೈರುತ್ಯ ರೈಲ್ವೆಯ ಜನರಲ್ ಮ್ಯಾನೆಜರ್ ಸಂಜೀವ ಕಿಶೋರ ಮತ್ತು ಪರಿಸರ ಅಧಿಕಾರಿ ಅಜಯಸಿಂಗ್ ಅವರಿಂದ ಸಮಗ್ರ ಮಾಹಿತಿ ಪಡೆಯಲಾಯಿತು.

Previous article38,000 ಕಿಲೋಮೀಟರ್ ಸೈಕ್ಲಿಂಗ್ ಪ್ರಯಾಣ ಮಾಡಿದ ಬ್ರಜೇಶ್‌ನನ್ನು ಭೇಟಿಯಾದ ಪ್ರತಾಪ್‌
Next articleಬಿಸಿಯೂಟದಲ್ಲಿ ಕರ್ತವ್ಯ ನಿರ್ಲಕ್ಷ್ಯ: ಮುಖ್ಯ ಶಿಕ್ಷಕಿ ಅಮಾನತು