ಸ್ಪಾದಲ್ಲಿ ಯುವಕನಿಗೆ ಚಾಕು ಇರಿತ

0
9

ಧಾರವಾಡ: ಇಲ್ಲಿನ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತನಿಗೆ ಸಂಬಂಧಿಸಿದ ಲಿಮೋರ್ಲ್ ಸ್ಪಾದಲ್ಲಿ ಯುವಕನಿಗೆ ಚಾಕು ಇರಿಯಲಾಗಿದೆ. ಧಾರವಾಡ ಶಿವಾಲಯ ನಿವಾಸಿ ಅಯಾನ್ ನದಾಫ್ ಚಾಕು ಇರಿತಕ್ಕೆ ಒಳಗಾದ ಯುವಕ.

ಮಧ್ಯಾಹ್ನ ಮದಾರಮಡ್ಡಿ ಬಳಿ ನಿಂತ ವೇಳೆ ಸ್ಪಾದಲ್ಲಿ ಇರುವ ವ್ಯಕ್ತಿಗಳು ಸ್ಪಾ ಬಳಿ ಹೇಳಿದ್ದರು. ಅದರಂತೆ ಸ್ಪಾಗೆ ಹೋದ ವೇಳೆ ನಮ್ಮ ಹುಡುಗರಿಗೆ ಏನೇನೋ ಹೇಳುತ್ತಿಯಾ ಎಂದು ನಾಲ್ಕು ಜನ ನನ್ನ ಮೇಲೆ ಹಲ್ಲೆ ಮಾಡಿದರು. ಅದರಲ್ಲಿ ಬೇಲೂರಿನ ಬಸವರಾಜ ಆಲಿಯಾಸ್ ಬೇಲೂರ ಡಾಲಿ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಇನ್ನೂ ಮೂವರು ಯಾರು ಎಂಬುದು ಗೊತ್ತಿಲ್ಲ ಎಂದು ಚಾಕು ಇರಿತಕ್ಕೆ ಒಳಗಾದ ಅಯಾನ್ ತಿಳಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿದ ಎಸಿಪಿ ವಿಜಯಕುಮಾರ ತಳವಾರ ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂಬುದು ತಿಳಿದಿಲ್ಲ. ವಿದ್ಯಾಗಿರಿ ಠಾಣೆ ಇನ್ಸ್ಪೆಕ್ಟರ್ ಅವರು ತನಿಖೆ ಕೈಗೊಂಡಿದ್ದಾರೆ ಎಂದರು.

Previous articleಸೆ. 30 ಮೈ ಶುಗರ್ ಸಕ್ಕರೆ ಕಾರ್ಖಾನೆ ಸಂಪೂರ್ಣ ಕಾರ್ಯಚರಣೆ: ಗೋಪಾಲಯ್ಯ ಕೆ
Next articleಮಕ್ಕಳ ಕಳ್ಳರು ವದಂತಿ: ಬೆನ್ನಟ್ಟಿದ ಜನ, ಇನ್ನೊವಾ ಪಲ್ಟಿ