ಸೂಕ್ತದಾಖಲೆಯಿಲ್ಲದ 2.80 ಲಕ್ಷ ವಶ

0
29
ಹಣ

ದಾವಣಗೆರೆ: ಸೂಕ್ತ ದಾಖಲೆಗಳಿಲ್ಲದ 2.80 ಲಕ್ಷ ರೂ. ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಮಂಗಳವಾರ ಜಿಲ್ಲೆಯ ಜಗಳೂರು ತಾಲೂಕು ಮುಸ್ಟೂರು ಚೆಕ್‌ ಪೋಸ್ಟ್‌ನಲ್ಲಿ ನಡೆದಿದೆ. ವಾಹನ ತಪಾಸಣೆ ವೇಳೆ ವಶಪಡಿಸಿಕೊಂಡ ಹಣವು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ್ದು ಎನ್ನಲಾಗಿದೆ. ಹಣವನ್ನು ಹೊಂದಿದ್ದ ಸಂಘದ ಪ್ರತಿನಿಧಿ ಭಾಗ್ಯಮ್ಮ ಸೂಕ್ತ ದಾಖಲೆ ತೋರಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸರಿಯಾದ ದಾಖಲೆ ಸಲ್ಲಿಸಿ ಹಣ ವಾಪಾಸ್ಸು ಪಡೆಯುವಂತೆ ಸೂಚಿಸಲಾಗಿದೆ.

Previous articleರಾಜೀನಾಮೆ ನೀಡುವ ವಿಚಾರವಿಲ್ಲ…
Next articleಬಿಜೆಪಿ ಮೊದಲ ಪಟ್ಟಿ ಬಿಡುಗಡೆ