ಸುಹಾಸ್‌ಗೆ ಶಹಬ್ಬಾಸ್ ಎಂದ ಸಿಎಂ

0
14

ಬೆಂಗಳೂರು: ಏಷ್ಯನ್ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.
ಸುಹಾಸ್‌ ಯತಿರಾಜ್‌ ಕರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಕರ್ನಾಟಕ ಮೂಲಕ ಯು.ಪಿ ಕೇಡರ್ ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಅವರಿಗೆ ಅಭಿನಂದನೆಗಳು. ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅಮೋಘ ಸಾಧನೆ ನಾಡಿನ ಪ್ರತಿಯೊಬ್ಬರಿಗೂ ಹೆಮ್ಮೆಯುಂಟುಮಾಡಿದೆ ಎಂದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ 2023 ಭಾರತೀಯ ಕ್ರೀಡೆಗಳಿಗೆ ಅಸಾಧಾರಣ ಸಂದರ್ಭವೆಂದು ಸಾಬೀತಾಗಿದೆ, ಅಲ್ಲಿ ರಾಷ್ಟ್ರದ ಪ್ಯಾರಾ-ಅಥ್ಲೀಟ್‌ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು ಮತ್ತು ಗಮನಾರ್ಹವಾದ ಪದಕಗಳ ಸಂಗ್ರಹವನ್ನು ಸಾಧಿಸಿದರು. ಐತಿಹಾಸಿಕ ಕ್ಷಣದಲ್ಲಿ ಭಾರತ ಶನಿವಾರ 27 ಚಿನ್ನ, 29 ಬೆಳ್ಳಿ ಮತ್ತು 44 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 100 ಪದಕಗಳನ್ನು ಮುಟ್ಟಿತು.

Previous articleಪ್ರತಿಯೊಬ್ಬರ ನಡೆ ಕೂಡ ನಮಗೆ ಗೊತ್ತಿದೆ
Next articleತುಳು ಭಾಷೆಯಲ್ಲಿ ಮಾತನಾಡಿ ಥ್ರಿಲ್ಲಾಗಿಸಿದ ಸಿಎಂ